ಪಡುಬಿದ್ರಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Update: 2020-07-25 20:46 IST
ಪಡುಬಿದ್ರಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರಿನಲ್ಲಿ ನಡೆದಿದೆ.
ಉಡುಪಿಯ ಕಾಲೇಜೊಂದರ ಪ್ರಥಮ ಬಿಕಾಂ ವಿದ್ಯಾರ್ಥಿನಿ ಎಲ್ಲೂರು ಸಾಣಿಂಜೆ ನಿವಾಸಿ ಸೌಜನ್ಯಾ(21). ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆಯ ಆನ್‍ಲೈನ್ ತರಗತಿ ಮತ್ತು ಸಿಎ ಪರೀಕ್ಷೆ ಇರುವುದರಿಂದ ಆಕೆಯ ಅತ್ತೆಯ ಮಗ ಮೊಬೈಲ್ ನೀಡಿದ್ದರು. ಆದರೆ ಸೌಜನ್ಯಾ ಇದರಲ್ಲಿ ಆಟವಾಡುತ್ತಿರುವುದನ್ನು ನೋಡಿ ಬುಧವಾರ ಬುದಿಮಾತು ಹೇಳಿದ್ದರು. ಅಂದೇ ರಾತ್ರಿ ವಿಷ ಸೇವಿಸಿದ ಈಕೆಯು ಮರುದಿನ ಬೆಳಿಗ್ಗೆ ಮನೆಯವರಲ್ಲಿ ತಿಳಿಸಿದ್ದಳು ಎನ್ನಲಾಗಿದೆ.
ಆಕೆಯನ್ನು ಆ ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರಿದಿದೆ.