ಶಾಂತಾರಾಮ ಸಿದ್ದಿ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Update: 2020-07-25 15:29 GMT

ಯಲ್ಲಾಪುರ:ಕರ್ನಾಟಕ ವಿಧಾನ ಪರಿಷತ್ತಿನ ನೂತನ ನಾಮನಿರ್ದೇಶಿತ ಸದಸ್ಯ ಬುಡಕಟ್ಟು ಸಿದ್ದಿ ಜನಾಂಗದ ಶಾಂತಾರಾಮ  ಸಿದ್ದಿ ಅವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ಮನೆಗೆ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು ಮತ್ತು  ಒಳನಾಡು ಜಲಸಾರಿಗೆ ಸಚಿವ  ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ಭೇಟಿ  ನೀಡಿ ನೀಡಿ ಸನ್ಮಾನಿಸಿದರು.

ಬಳಿಕ ಮಾತನಾಡಿ ಕೋಟ, ಕಾಡು-ಮೇಡು, ಗುಡ್ಡ-ಬೆಟ್ಟಗಳಲ್ಲಿ ಬದುಕಿ‌ಬಾಳುತ್ತಿರುವ, ಕಾಡಿನ ಮಕ್ಕಳೆಂದೆ ಪರಿಗಣಿಸಲ್ಪಡುತ್ತಿರುವ ವನವಾಸಿಗಳನ್ನು ಒಟ್ಟುಗೂಡಿಸಿ ಆ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರ ಭಕ್ತಿ ಮೂಡಿಸುತ್ತಿರುವ  ಶಾಂತರಾಮ ಸಿದ್ಧಿಯವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದು ನಮ್ಮ ಸರ್ಕಾರಕ್ಕೊಂದು ಹೆಮ್ಮೆ ಎಂದು‌‌ ಪ್ರತಿಕ್ರಿಯೆ ನೀಡಿದರು.

ಕಡು ಬಡತನದಲ್ಲಿ ಬದುಕಿ ಬಾಳುತ್ತಿದ್ದ ಶಾಂತರಾಮ ಸಿದ್ದಿಯವರನ್ನು ಶಾಸಕರನ್ನಾಗಿ ‌ಮಾಡಿದ ಪ್ರಧಾನಿ  ‌ನರೇಂದ್ರ ಮೋದಿ,  ಮುಖ್ಯಮಂತ್ರಿ ಬಿ‌. ಎಸ್. ಯಡಿಯೂರಪ್ಪನವರು ಸೂಕ್ತ ವ್ಯಕ್ತಿಯನ್ನೇ ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ  ಜಿಲ್ಲಾ, ತಾಲೂಕು , ಗ್ರಾಮ ಪಂಚಾಯತ್ ಸದಸ್ಯರು  ಹಾಗೂ  ಪಕ್ಷದ ಕಾರ್ಯಕರ್ತರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News