×
Ad

ಉಡುಪಿ: ಔಷಧೀಯ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

Update: 2020-07-25 22:15 IST

ಉಡುಪಿ, ಜು.25: ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಗೋ ಗ್ರೀನ್ ಕಾರ್ಯಕ್ರಮದ ಅಂಗವಾಗಿ ಔಷಧೀಯ ಗಿಡಗಳ ಸಹಿತ ವಿವಿಧ ವಿಶೇಷ ತಳಿಯ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಬ್ರಹ್ಮಗಿರಿ ಜಂಕ್ಷನ್ನಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.

ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ವರ್ವಾಡಿ ಮಾತನಾಡಿ, ಲಯನ್ಸ್ ಜಿಲ್ಲೆ 327 ಸಿ ‘ಗೊ ಗ್ರೀನ್ ಸೇವ್ ಎನ್ವೈರ್ನಮೆಂಟ್’ ಡಿಸ್ಟ್ರಿಕ್ ಛೇರ್ ಪರ್ಸನ್ ವಿಷ್ಣುದಾಸ್ ಪಾಟೀಲ್, ಬಿಲ್ವಪತ್ರೆ, ಅಶೋಕ, ಕೋಕಂ, ನೆಲ್ಲಿಕಾಯಿ ಜೊತೆಗೆ ಪೇರಳೆ, ಹಲಸು ಮತ್ತಿತರ ಹಣ್ಣಿನ ಸಸ್ಯಗಳ ಸಹಿತ 150ಕ್ಕೂ ಹೆಚ್ಚು ಸಸ್ಯಗಳನ್ನು ಒದಗಿಸಿದ್ದು, ಇವುಗಳನ್ನು ಬ್ರಹ್ಮಗಿರಿ ಜಂಕ್ಷನ್, ಲಯನ್ಸ್ ಭವನ ಪರಿಸರ, ಅಜ್ಜರಕಾಡು ಸುತ್ತಮುತ್ತ, ಉಡುಪಿ ಶಾಸಕರ ಕಚೇರಿ ಆವರಣ, ಕೆಲವು ಶಾಲೆಯ ವಠಾರಗಳಲ್ಲಿ ನೆಡಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ರಿಲೀವಿಂಗ್ದ ಹಂಗರ್ ಹಾಗೂ ಅವಾರ್ಡ್ಸ್ ಪ್ರೊಗ್ರಾಂ ಚೀಫ್ ಕೋ-ಆರ್ಡಿನೇಟರ್ ರವಿರಾಜ್ ಯು.ಎಸ್., ಉಡುಪಿ ಲಯನ್ಸ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ಲೂಯಿಸ್ ಲೋಬೊ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News