ಅಕ್ರಮ 17 ಜಾನುವಾರು ಸಾಗಾಟ: ಇಬ್ಬರ ಬಂಧನ

Update: 2020-07-25 16:53 GMT

ಅಮಾಸೆಬೈಲು, ಜು.25: ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅಮಾಸೆಬೈಲು ಪೊಲೀಸರು ಹೊಸಂಗಡಿ ಚೆಕ್ಪೋಸ್ಟ್ ಹತ್ತಿರ ಜು.25ರಂದು ಬೆಳಗಿನ ಜಾವ ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮೆಹಬೂಬ್(27) ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾ ಭಕ್ಷಿ(33) ಬಂಧಿತ ಆರೋಪಿಗಳು. ಕಂಟೈನರ್ನಲ್ಲಿದ್ದ ಮೂರು ಕೋಣಗಳು, 13 ಎಮ್ಮೆಗಳು ಮತ್ತು 1 ಹೋರಿ ಸೇರಿದಂತೆ ಒಟ್ಟು 17 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಜಾನುವಾರುಗಳನ್ನು ಹಾವೇರಿಯಿಂದ ಮಂಗಳೂರಿಗೆ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News