ಫಾ.ಮುಲ್ಲರ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಗೆ ಕಾಂಗ್ರೆಸ್ ಕಾರ್ಯಪಡೆಯ ತಂಡ ಭೇಟಿ
ಮಂಗಳೂರು,ಜು.25:ಫಾದರ್ ಮುಲ್ಲರ್ ಆಸ್ಪತ್ರೆಗೆ ಕಾಂಗ್ರೆಸ್ ಪಕ್ಷದ ಕೋವಿಡ್ -19 ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಮಾಜಿ ಶಾಸಕರಾದ ಯು.ಟಿ.ಖಾದರ್ , ಐವನ್ ಡಿ ಸೋಜ ಅವರ ನೇತ್ರತ್ವದಲ್ಲಿ ಭೇಟಿ ನೀಡಿ ಸರಕಾರದ ಯೋಜನೆಯ ಪ್ರಕಾರ ಕೋವಿಡ್ 19ಸೋಂಕು ತಡೆಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಹಾಗೂ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ರುಡಾಲ್ಫ್ ರವಿ ಡೇಸಾ ಭೇಟಿ ನೀಡಿದ ತಂಡದ ಸದಸ್ಯರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೋವಿಡ್ - 19 ಸಹಾಯವಾಣಿ ಮತ್ತು ವೆಚ್ಚಗಳ ವಿವರ ನೀಡಿದರು. ಯಾವೂದೇ ರೋಗಿಗಳು ಬಂದರು ನಿರಾಕರಿಸದೆ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಜ್ವರದ ತಪಾಸಣೆಯ ಬಳಿಕ ಅಗತ್ಯವಿದ್ದರೆ ಮಾತ್ರ ಕೋವಿಡ್ -19 ಚಿಕಿತ್ಸೆ ನೀಡಲಾಗುವುದು. ಕೋವಿಡ್ - 19 ಸೋಂಕು ಪಾಸಿಟಿವ್ ರೋಗಿಗಳಿಗೆ ಅವಕಾಶವಿದ್ದರೆ ಮನೆಯಲ್ಲಿಯೆ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಯಲ್ಲಿ ಸರಕಾರ ನಿಗದಿ ಪಡಿಸಿದ ದರಕ್ಕಿಂತಲೂ ಶೇ. 50 ರಿಯಾಯಿತಿ ದರದಲ್ಲಿ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಡಳಿತಾಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮನಪಾ ವಿಪಕ್ಷ ಮುಖ್ಯ ನಾಯಕ ಅಬ್ದುಲ್ ರವೂಫ್ , ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ ಅಶ್ರಫ್ ಬಜಾಲ್ ಮತ್ತು ಇತರ ಕಾಂಗ್ರೆಸ್ ಮುಖಂಡ ರಾದ ರಮಾನಂದ ಪೂಜಾರಿ ,ಗಿರೀಶ್ ಶೆಟ್ಟಿ, ವಿಶ್ವಾಸ್ ದಾಸ್, ಚೇತನ್ ಉರ್ವ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ. ಅಜಿತ್ ಮಿನೇಜಸ್, ಆಸ್ಪತ್ರೆಯ ಆಡಳಿತಾಧಿಕಾರಿ ವಂ. ನೆಲ್ಸನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಉದಯ ಕುಮಾರ್ ಮತ್ತು ಕೆಲ್ವಿನ್ ಪೀಟರ್ ಪಾಯಸ್ ಮೊದಲಾದವರು ಉಪಸ್ಥಿತರಿದ್ದರು.