ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಬ್ರಾಂಚ್ ಮಟ್ಟದ ಸಭೆ
ಮಂಗಳೂರು ಜು.26: ಎಸ್.ವೈ.ಎಸ್. ಕೆ.ಸಿ.ರೋಡ್ ಸೆಂಟರ್ ಅದೀನದಲ್ಲಿರುವ ಬ್ರಾಂಚ್ ಮಟ್ಟದ ಸಭೆಯು ರವಿವಾರ ಹಿದಾಯತ್ ನಗರ ಮದ್ರಸದಲ್ಲಿ ಜರಗಿತು.
ಸಭೆಯಲ್ಲಿ ಪ್ರತೀ ಬ್ರಾಂಚ್ ಮಟ್ಟದಲ್ಲಿ ಧಾರ್ಮಿಕ ವಿಚಾರವನ್ನು ತಿಳಿಯಪಡಿಸುವುದು, ಕೋವಿಡ್-19 ಜನರಲ್ಲಿ ಜಾಗೃತಿ ಮೂಡಿಸುದು, ಅಶಕ್ತರನ್ನು ಸಂಪರ್ಕಿಸಿ ಬೇಕಾದ ರೀತಿಯ ಸಹಕಾರ ನೀಡುವುದು ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸೆಕ್ಟರ್ ಅಧ್ಯಕ್ಷ ಎ.ಪಿ.ಮುಹಮ್ಮದ್, ಸ್ಥಳೀಯ ಮಸೀದಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ. ಎಸ್ ವೈಎಸ್ ಅಧ್ಯಕ್ಷ ಕಬೀರ್ ಸಅದಿ, ಇಸಾಬ ಜಿಲ್ಲಾ ಅಮೀರ್ ಇಸ್ಮಾಯೀಲ್ ಕಿನ್ಯ, ಕೆ.ಸಿ.ರೋಡ್ ಸೆಂಟರ್ ಇಸಾಬಾ ಅಮೀರ್ ಬಿ.ಎಚ್ ಇಸ್ಮಾಯೀಲ್, ಸಾಂತ್ವನ ಕಾರ್ಯದರ್ಶಿ ಹಕೀಂ ಪೂಮಣ್ಣು, ದಅವಾ ಕಾರ್ಯದರ್ಶಿ ಮುಸ್ತಫ ಝುಹ್ರಿ ಕೆ.ಸಿ.ರೋಡ್, ಸೆಂಟರ್ ಅಧ್ಯಕ್ಷ ಎಂ.ಪಿ.ಮುಹಮ್ಮದ್. ಹಾಗೂ ಪ್ರತೀ ಬ್ರಾಂಚ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸೆಂಟರ್ ಕಾರ್ಯದರ್ಶಿ ಫಾರೂಕ್ ಕೋಟೆಪುರ ಸ್ವಾಗತಿಸಿ, ವಂದಿಸಿದರು.