×
Ad

ಎಸ್ಸೆಸ್ಸೆಫ್ ಡೀನ್ ಮೊದಲ ಹಂತದ ಕಾರ್ಯಾಗಾರ ಸಮಾರೋಪ

Update: 2020-07-26 17:37 IST

ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಜಿಲ್ಲಾ ಹಾಗೂ ಝೋನ್ ಕಾರ್ಯಕಾರಿ ಸದಸ್ಯರಿಗೆ ನಡೆಸಿದ 7 ದಿನಗಳ ಮೊದಲ ಹಂತದ ಡೀನ್ ತರಬೇತಿ ಕಾರ್ಯಾಗಾರವು ಖ್ಯಾತ ವಾಗ್ಮಿ ಕೂಟುಂಬಾರ ಅಬ್ದುರ್ರಹ್ಮಾನ್ ದಾರಿಮಿ ಅವರ ತರಬೇತಿಯೊಂದಿಗೆ ಸಮಾಪ್ತಿಯಾಯಿತು.

ಫಾರೂಕ್ ನ‌ಈಮಿ ಕೊಲ್ಲಂ, ಕೆ.ಎಂ ಸಿದ್ದೀಕ್ ಮೋಂಟುಗೋಳಿ, ಮಜೀದ್ ಅರಿಯಲ್ಲೂರು, ಕಲಾಂ ಸರ್ ಮಾವೂರು, ಜಿ.ಯಂ ಮುಹಮ್ಮದ್ ಕಾಮಿಲ್ ಸಖಾಫಿ, ಉಮರ್ ಸಖಾಫಿ ಎಡಪ್ಪಾಲ ಮೊದಲಾದ ನಾಯಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಆನ್ಲೈನ್ ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನ‌ಈಮಿ ಡೀನ್ ನೋಟ್ ಮಂಡಿಸಿದರು.

ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುಲ್ ರ್ರಹ್ಮಾನ್ ರಝ್ವಿ, ಕೆ.ಕೆಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ,ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಕ್ಕಟ್ಟೆ, ಕಾರ್ಯದರ್ಶಿಗಳಾದ  ಹಾಫಿಳ್ ಯಾಕೂಬ್ ಸಅದಿ ನಾವೂರು, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ, ನವಾಝ ಭಟ್ಕಳ್ ರಾಜ್ಯ ನಾಯಕರಾದ ಸಯ್ಯದ್ ಅಲವೀ ತಂಙಳ್ ಕರ್ಕಿ, ಅಶ್ರಫ್ ಮುಸ್ಲಿಯಾರ್ ಉಡುಪಿ, ಎನ್.ಸಿ ರಹೀಂ ಉಡುಪಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಆರಿಫ್ ಸಅದಿ ಭಟ್ಕಳ್, ಖಾದರ್ ಭಾಷ ದಾವಣಗೆರೆ, ಸಫ್ವಾನ್ ಚಿಕ್ಕಮಗಳೂರು, ಶಾಕಿರ್ ಹಾಜಿ ಮಿತ್ತೂರು ಹಾಗೂ ಜಿಲ್ಲಾ ನಾಯಕರು ಭಾಗವಹಿಸಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸ್ವಾಗತಿಸಿದರು. ಶಾಹಿನ್ ಚಿಕ್ಕಮಗಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News