ಸೋಮವಾರ ಉಡುಪಿ ಸಿಟಿಸೆಂಟರ್‌ನಲ್ಲಿ ‘ಬಿಗ್ ಶೂಸ್’ ಶುಭಾರಂಭ
Update: 2020-07-26 18:11 IST
ಉಡುಪಿ, ಜು.26: ಉಡುಪಿ ನಗರದ ಪ್ರತಿಷ್ಠಿತ ಹಾಗೂ ಅತ್ಯಂತ ಬೃಹತ್ ಪಾದರಕ್ಷೆ ಮಳಿಗೆಯಾಗಿರುವ ‘ಶೂ ಬಜಾರ್’ ಗ್ರೂಪ್‌ನ ನಾಲ್ಕನೆ ಶಾಖೆ ‘ಬಿಗ್ ಶೂಸ್’ ಜು.27ರಂದು ಸೋಮವಾರ ಬೆಳಗ್ಗೆ 11ಗಂಟೆಗೆ ಉಡುಪಿ ಸಿಟಿ ಸೆಂಟರ್ ಮಾಲ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಉದ್ಧಾಟನೆಗೊಳ್ಳಲಿದೆ.
ನೂತನ ಮಳಿಗೆಯನ್ನು ಸಿಟಿ ಸೆಂಟರ್ ಆಡಳಿತ ನಿರ್ದೇಶಕ ಜಮಾಲುದ್ದೀನ್ ಅಬ್ಬಾಸ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿಯ ಗೀತಾಂಜಲಿ ಸಿಲ್ಕ್ಸ್‌ನ ರಾಮಕೃಷ್ಣ(ಆರ್.ಕೆ.), ಉಡುಪಿ ಟೌನ್ ಕೋಆಪ ರೇಟಿವ್ ಬ್ಯಾಂಕಿನ ಸಹಾಯಕ ಮಹಾಪ್ರಂಬಂಧಕ ವಿಷ್ಣುಮೂರ್ತಿ ಆಚಾರ್ಯ, ಖಾಲೀದ್ ಉಡುಪಿ ಭಾಗವಹಿಸಲಿರುವರು.
ಇಲ್ಲಿ ಪುರುಷರ, ಮಹಿಳೆಯರ, ಮಕ್ಕಳ ನವೀನ ಮಾದರಿಯ ವಿವಿಧ ಬ್ರಾಂಡಿನ ಹಾಗೂ ಉತ್ಕೃಷ್ಟ ಗುಣಮಟ್ಟದ ಪಾದರಕ್ಷೆಗಳು, ಶೂಸ್‌ಗಳು ಲಭ್ಯ ಎಂದು ‘ಶೂ ಬಜಾರ್’ ಮಾಲಕರಾದ ಹಾಜಿ.ಕೆ. ಅಜಬ್ಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.