ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ 85 ಮಂದಿಗೆ ಕೊರೋನ ಸೋಂಕು ದೃಢ

Update: 2020-07-26 13:17 GMT

ಕಾರವಾರ,ಜು.26: ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ 85 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1753ಕ್ಕೆ ಏರಿಕೆಯಾಗಿದೆ. 

ಈ ಪೈಕಿ ಕಾರವಾರ 13, ಅಂಕೋಲಾ 5, ಕುಮಟಾ 13, ಹೊನ್ನಾವರ 4, ಭಟ್ಕಳ 11, ಶಿರಸಿ 9, ಯಲ್ಲಾಪುರ 1, ಮುಂಡಗೋಡ 3, ಹಳಿಯಾಳದಲ್ಲಿ 26 ಪ್ರಕರಣಗಳು ಪತ್ತೆಯಾಗಿದೆ.

ಹಳಿಯಾಳದಲ್ಲಿ ಎರಡು ಸಾವು: ಜಿಲ್ಲೆಯ ಹಳಿಯಾಳದಲ್ಲಿ ಇಂದು ಇಬ್ಬರು ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ. ಇವರು ಹಳಿಯಾಳದ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ಜಿಲ್ಲೆಯಲ್ಲಿ ಈವರೆಗೆ 16 ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯ ಕಾರವಾರ 1, ಅಂಕೋಲಾ 1, ಭಟ್ಕಳ 6, ಶಿರಸಿ 2, ಯಲ್ಲಾಪುರ 1, ಮುಂಡಗೋಡ 1, ಹಳಿಯಾಳದಲ್ಲಿ ಮೂವರು ಮೃತಪಟ್ಟಿದ್ದಾರೆ. 

90 ಮಂದಿ ಗುಣಮುಖ: ಜಿಲ್ಲೆಯಲ್ಲಿ ರವಿವಾರ 90 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ  ಬಿಡುಗಡೆಗೊಂಡಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 2, ಕುಮಟಾ 18, ಹೊನ್ನಾವರ 13, ಸಿದ್ದಾಪುರ 4, ಯಲ್ಲಾಪುರ 4, ಮುಂಡಗೋಡ 3 ,ಹಳಿಯಾಳ 44 ಹಾಗೂ ಜೊಯಿಡಾದಲ್ಲಿ 2 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ಇಂದು ಪತ್ತೆಯಾದ ಸೋಂಕಿತರಿಗಿಂದ ಹೆಚ್ಚು ಗುಣಮುಖರಾದವರ ಸಂಖ್ಯೆಯೇ ಹೆಚ್ಚು. 

ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ನಲ್ಲಿ ಒಟ್ಟು 716 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈ ಪೈಕಿ ಹಳಿಯಾಳದಲ್ಲಿ 272 ಸಕ್ರಿಯ ಪ್ರಕರಣವಿದ್ದು, ಕಾರವಾರ 75, ಅಂಕೋಲಾ 47, ಕುಮಟಾ 78, ಹೊನ್ನಾವರ 26, ಭಟ್ಕಳ 76, ಶಿರಸಿ 79, ಸಿದ್ದಾಪುರ 15, ಯಲ್ಲಾಪುರ 15, ಮುಂಡಗೋಡ 27, ಜೊಯಿಡಾ ತಾಲೂಕಿನಲ್ಲಿ 6 ಮಂದಿ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟೂ ಶೇ.50ಕ್ಕಿಂತ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಪತ್ತೆಯಾದ ಸೋಂಕಿತರ ಪೈಕಿ 268 ಜನರು ಗುಣಮುಖರಾಗಿದ್ದು ಕಾರವಾರ 64, ಅಂಕೋಲಾ 36, ಕುಮಟಾ 135, ಹೊನ್ನಾವರ 91, ಶಿರಸಿ 62, ಸಿದ್ದಾಪುರ 16, ಯಲ್ಲಾಪುರ 59, ಮುಂಡಗೋಡ 63, ಹಳಿಯಾಳ 134, ಜೊಯಿಡಾದಲ್ಲಿ 8 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News