×
Ad

ಉಡುಪಿ: ಅಂಬೇಡ್ಕರ್ ಯುವ ಸೇನೆಯಿಂದ ಶ್ರಮದಾನ

Update: 2020-07-26 19:25 IST

ಉಡುಪಿ, ಜು.26: ಅಂಬೇಡ್ಕರ್ ಯುವ ಸೇನೆ ಪಡುಕುದ್ರು-ಕೆಮ್ಮಣ್ಣು ಘಟಕದ ವತಿಯಿಂದ ಪಡುಕುದ್ರು -ತಿಮ್ಮನಕುದ್ರು ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದ ಗಿಡ ಗಂಟಿಗಳನ್ನು ತೆಗೆಯುವ ಮೂಲಕ ಶ್ರಮದಾನ ಮಾಡಲಾಯಿತು.

ಸುಮಾರು ಎರಡು ಕಿ.ಮೀ. ಉದ್ದವಿರುವ ಈ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಹುಲ್ಲು ಮತ್ತು ಗಿಡಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತಿತ್ತು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ರಾಜೇಶ್ ನೇತೃತ್ವದಲ್ಲಿ ಶ್ರಮದಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುಧಾ, ಉದಯ, ರಾಮ್‌ದಾಸ್, ರಿತೇಶ್, ಜಯಕರ, ಕಾನ್ತು, ಹರಿದಾಸ್, ರಮೇಶ್, ರಾಕೇಶ್, ಅವಿನಾಶ್, ಸುಹಾಸ್, ಕೃಷ್ಣ, ನಿಖಿಲ್, ಕೌಶಿಕ್, ಪ್ರತೀಕ್, ರವಿ, ನಟರಾಜ್, ಶಿವರಾಮ, ಸಂತು, ಪ್ರಜ್ವಲ್, ಅಶೋಕ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News