‘ಪ್ರಜಾಪ್ರಭುತ್ವ ಉಳಿಸಿ’ ಎಂಬ ರಾಹುಲ್ ಗಾಂಧಿ ಕರೆಗೆ ಭಾರೀ ಪ್ರತಿಕ್ರಿಯೆ: #SpeakUpForDemocracy ಟ್ರೆಂಡಿಂಗ್

Update: 2020-07-26 15:14 GMT

ಹೊಸದಿಲ್ಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕರೆ ನೀಡಿದ್ದ ಟ್ವಿಟರ್ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. #SpeakUpForDemocracy  ಹ್ಯಾಶ್ ಟ್ಯಾಗ್ ಬಳಸಿರುವ ಅವರು, “ಜನರು ಒಂದಾಗಿ ಪ್ರಜಾಪ್ರಭುತ್ವಕ್ಕಾಗಿ ಧ್ವನಿಯೆತ್ತಿ’ ಎಂದು ಕರೆ ನೀಡಿದ್ದಾರೆ.

ರಾಹುಲ್ ಗಾಂಧಿಯವರ ಈ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶ್ವಾದ್ಯಂತ 3 ಲಕ್ಷದ 75 ಸಾವಿರ ಟ್ವೀಟ್ ಗಳಾಗಿವೆ.

ಈ ಬಗ್ಗೆ ವಿಡಿಯೋ ಒಂದರಲ್ಲಿ ಕಾಂಗ್ರೆಸ್, ಇಡೀ ದೇಶವೇ ಕೊರೋನ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ  ಬಿಜೆಪಿ ಸಂವಿಧಾನವನ್ನು ನಾಶಗೈಯುತ್ತಿದ್ದು, ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತಿದೆ. ಮಧ್ಯಪ್ರದೇಶದಲ್ಲೂ ಬಿಜೆಪಿ ಇದನ್ನೇ ಮಾಡಿತ್ತು ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News