ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ರವಿವಾರ 2 ಕೊರೋನ ಪ್ರಕರಣ ಪತ್ತೆ
Update: 2020-07-26 20:53 IST
ಉಳ್ಳಾಲ, ಜು.27: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ರವಿವಾರ ಕೇವಲ ಎರಡು ಕೊರೋನ ಪ್ರಕರಣ ದಾಖಲಾದ ಬಗೆ ಆರೋಗ್ಯ ಇಲಾಖೆ ವರದಿ ಮಾಡಿದೆ. ಇದರಿಂದ ಕಳೆದ ಒಂದು ವಾರದಿಂದ ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಕೊರೋನ ಸೋಂಕು ಪ್ರಕರಣದಲ್ಲಿ ಇಳಿಕೆ ಕಂಡಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ ಅಳೇಕಲದಲ್ಲಿ 63 ವರ್ಷದ ಪುರುಷ, ತೊಕ್ಕೊಟ್ಟುವಿನಲ್ಲಿ 7 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 27ವರ್ಷದ ಯುವಕ, ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲದಲ್ಲಿ 28 ವರ್ಷದ ಮಹಿಳೆಗೆ ಕೊರೊನ ಸೋಂಕು ದೃಢಪಟ್ಟಿದೆ.
ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 464 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.