ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಕಲಿತ ಶಾಲೆಗೆ ಹೆಮ್ಮೆ ತಂದ ಬುಡಕಟ್ಟು ಬಾಲಕರು

Update: 2020-07-26 15:51 GMT

ಕೋಲ್ಕತಾ, ಜು. 26: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ನಮ್ಮ ಹಳೆಯ ವಿದ್ಯಾರ್ಥಿ ಎಂದು ಹೆಮ್ಮೆ ಪಟ್ಟುಕೊಂಡಿದ್ದ ಕೋಲ್ಕೊತ್ತಾದ ಜನಪ್ರಿಯ ಸೌತ್ ಪಾಯಿಂಟ್ ಸ್ಕೂಲ್‌ನ ಇಬ್ಬರು ಬುಡಕಟ್ಟು ವಿದ್ಯಾರ್ಥಿಗಳು ತಮ್ಮ ಅಸಾಧಾರಣ ಸಾಧನೆಯಿಂದ ಶಾಲೆ ಹೆಮ್ಮೆಗೆ ಮತ್ತೊಂದು ಗರಿ ಸೇರಿಸಿದ್ದಾರೆ.

ಈ ವರ್ಷ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿರುವುದು ಇದಕ್ಕೆ ಕಾರಣ. 18 ವರ್ಷ ವಯಸ್ಸಿನವರಾದ ಮಹಾದೇಬ್ ಬಾಗಲ್ ಶೇ. 83.6 ಅಂಕ ಗಳಿಸಿದ್ದರೆ, ರೋಹಿತ್ ಮಂಡಿ ಶೇ. 74 ಅಂಕ ಗಳಿಸಿದ್ದಾರೆ. ಸೌತ್ ಪಾಯಿಂಟ್ ಸ್ಕೂಲ್‌ನ ವಿದ್ಯಾರ್ಥಿಗಳ ಸಾಧನೆ ಸಾಮಾನ್ಯವಾಗಿ ಅತ್ಯುತ್ತಮವಾಗಿಯೇ ಇರುತ್ತದೆ. ಇದರ ಟಾಪರ್ ಈ ವರ್ಷದ ಸಿಬಿಎಸ್‌ಇ ಪರೀಕ್ಷೇಯಲ್ಲಿ ಶೇ. 99.4 ಅಂಕ ಗಳಿಸಿದ್ದಾರೆ.

ಮಹಾದೇಬ್ ಬಾಗಲ್ ಹಾಗೂ ರೋಹಿತ್ ಮಂಡಿಯ ವಿಶೇಷವೆಂದರೆ, ರೋಹಿತ್ ಬಂದಿರುವುದು ಪಶ್ಚಿಮ ಕೋಲ್ಕೊತ್ತಾದಿಂದ 209 ಕಿ.ಮೀ. ದೂರ ಇರುವ ಬೇಲ್‌ಪಹಾರಿಯಿಂದ ಹಾಗೂ ಮಹಾದೇವ್ ಬಂದಿರುವುದು 25 ಕಿಲೋಮೀಟರ್ ದೂರವಿರುವ ಗಿಧ್ನಿಯಿಂದ. ಇದು ಪಶ್ಚಿಮಬಂಗಾಳದ ಬುಡಕಟ್ಟು ವಲಯದ ಕೇಂದ್ರ. ಅಲ್ಲದೆ, ಇಲ್ಲಿನ ಜಂಗಲ್‌ಮಹಲ್ ಮಾವೋವಾದಿಗಳ ಚಟುವಟಿಕೆಯ ಕೇಂದ್ರ. ಈ ಪ್ರದೇಶದಲ್ಲೇ ಈ ಇಬ್ಬರು ವಿದ್ಯಾರ್ಥಿಗಳು ಬೆಳೆದಿರುವುದು. ರೋಹಿತ್ ಅವರ ತಂದೆ ಬ್ಯಾಂಕ್ ಉದ್ಯೋಗಿ, ಮಹಾದೇವ್ ಅವರ ತಂದೆ ದಿನಗೂಲಿ ಕಾರ್ಮಿಕ. ಇಬ್ಬರು ಬೆಲ್‌ಪಹಾರಿ ಎಸ್‌ಸಿ ಶಾಲೆಯಲ್ಲಿ 6ನೇ ತರಗತಿಯಿಂದ 2015ರಿಂದಲೇ ಸಹಪಾಠಿಗಳು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯಂತೆ ರೋಹಿತ್, ಮಹಾದೇವ್ ಹಾಗೂ ನಾಲ್ವರು ಬಾಲಕಿಯರು ಸೇರಿದಂತೆ ಬುಡಕಟ್ಟು ವಲಯದ 9 ಮಂದಿ ವಿದ್ಯಾರ್ಥಿಗಳು ಕೊಲ್ಕೊತ್ತಾದ ಅತಿ ಶ್ರೇಷ್ಟ ಇಂಗ್ಲಿಷ್ ಮಾಧ್ಯಮದ ಶಾಲೆ ಎಂದು ಪರಿಗಣಿಸಲಾಗುವ ಸೌತ್ ಪಾಯಿಂಟ್ ಶಾಲೆಗೆ ಕಳುಹಿಸಿ ಕೊಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News