‘ಬ್ಲಾಕ್ ಲೈವ್ಸ್ ಮ್ಯಾಟರ್’ ರ‍್ಯಾಲಿಯಲ್ಲಿ ಗುಂಡು ಹಾರಾಟ; ಓರ್ವ ಬಲಿ

Update: 2020-07-26 16:06 GMT

ಆಸ್ಟಿನ್, ಜು.26: ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್‌ನಲ್ಲಿ ಶನಿವಾರ ವರ್ಣಭೇದದ ವಿರುದ್ಧ ನಡೆದ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನಾ ರ‍್ಯಾಲಿಯಲ್ಲಿ ವ್ಯಕ್ತಿಯೊಬ್ಬ ಹಲವಾರು ಸುತ್ತು ಗುಂಡುಗಳನ್ನು ಹಾರಿಸಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಸುಮಾರು 100 ಮಂದಿಯಷ್ಟಿದ್ದ ಪ್ರತಿಭಟನಕಾರರ ಗುಂಪೊಂದು ಟೆಕ್ಸಾಸ್ ರಾಜಧಾನಿ ಆಸ್ಟಿನ್‌ನಲ್ಲಿ ಪ್ರತಿಭಟನಾ ಜಾಥಾದಲ್ಲಿ ತೆರಳುತ್ತಿದ್ದಾಗ ಗುಂಡು ಹಾರಾಟ ನಡೆದಿದೆ.

ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಯಾರಿಗೂ ಗಾಯಗಳಾಗಿಲ್ಲವೆಂದು ಆಸ್ಟಿನ್ ನಗರದ ಪೊಲೀಸ್ ಹಾಗೂ ತುರ್ತು ವೈದ್ಯಕೀಯ ಸೇವಾ ಇಲಾಖೆಯು ಟ್ವೀಟ್ ಮಾಡಿದೆ.

ರೈಫಲ್ ಹೊಂದಿದ್ದ ಶಂಕಿತ ಹಂತಕನು ಕಾರಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಿನೆಪೊಲಿಸ್‌ನಲ್ಲಿ ಆಫ್ರಿಕ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಪೊಲೀಸರ ವಶದಲ್ಲಿ ಉಸಿರುಗಟ್ಟಿ ಮೃತಪಟ್ಟ ಬಳಿಕ ಅಮೆರಿಕದಲ್ಲಿ ಜನಾಂಗೀಯವಾದ ಹಾಗೂ ಪೊಲೀಸ್ ದೌರ್ಜನ್ಯದ ವಿರುದ್ಧ ಸರಣಿ ಪ್ರತಿಭಟನಾ ಸಭೆಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News