ಉಡುಪಿ: ನೇಜಾರಿನ ಮೃತ ವ್ಯಕ್ತಿಗೆ ಕೊರೋನ ಪಾಸಿಟಿವ್ ದೃಢ; 54 ಮನೆ, 8 ಅಂಗಡಿಗಳು ಸೀಲ್‌ಡೌನ್

Update: 2020-07-27 17:30 GMT

ಉಡುಪಿ, ಜು.27: ಎರಡು ದಿನಗಳ ಹಿಂದೆ ಮೃತಪಟ್ಟ ಕಲ್ಯಾಣಪುರ ನೇಜಾರಿನ 44 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೋನ ಸೋಂಕು ಪತ್ತೆ ಯಾಗಿ ರುವುದರಿಂದ ನೇಜಾರಿನ ಪರಿಸರವನ್ನು ರವಿವಾರ ಸಂಜೆ ವೇಳೆ ಸೀಲ್‌ಡೌನ್ ಮಾಡಿ ಕಂಟೈನ್‌ಮೆಂಟ್ ಝೋನ್ ಘೋಷಿಸಲಾಗಿದೆ.

ಮೃತ ಸೋಂಕಿತ ವ್ಯಕ್ತಿಯ ಮನೆಯ ಸುತ್ತಮುತ್ತ ಇರುವ ಒಟ್ಟು 54 ಮನೆಗಳು ಮತ್ತು ಎಂಟು ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಮನೆ ಹಾಗೂ ಅಂಗಡಿಗೆ ಸಂಬಂಧಿಸಿದ ಒಟ್ಟು 241 ಮಂದಿಯನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೇನ್‌ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರು ಜು.25ರಂದು ಉಡುಪಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೋನ ಪರೀಕ್ಷೆಗೆ ಒಳಪಡಿಸಿದಾಗ ಜು.26ರಂದು ಮಧ್ಯಾಹ್ನ ಇವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News