ಹೆಜಮಾಡಿ: ಡಾಬಾ ಕಟ್ಟಡದ ಮಾಲಕ ಆತ್ಮಹತ್ಯೆ
Update: 2020-07-27 22:56 IST
ಪಡುಬಿದ್ರೆ, ಜು.27: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಜಮಾಡಿಯಲ್ಲಿ ಇಂದು ಬೆಳಕಿಗೆ ಬಂದಿದೆ. ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜು ಬಳಿಯ ನಿವಾಸಿ, ಹೆಜಮಾಡಿ ಪರಿವಾರ ಡಾಬಾ ಕಟ್ಟಡದ ಮಾಲಕ ದಿನೇಶ್ ಶೆಟ್ಟಿ(45) ಆತ್ಮಹತ್ಯೆ ಮಾಡಿಕೊಂಡವರು.
ಇವರಿಗೆ ಹೆಜಮಾಡಿಯಲ್ಲಿ ಮನೆಯಿದ್ದರೂ ಸುಮಾರು 9 ತಿಂಗಳ ಹಿಂದೆ ಮಂಗಳೂರಿನ ಕೊಟ್ಟಾರದಲ್ಲಿ ಮನೆ ನಿರ್ಮಿಸಿ ಅಲ್ಲೇ ವಾಸ್ತವ್ಯವಿದ್ದರು. 4 ದಿನಗಳ ಹಿಂದ ಹೆಜಮಾಡಿಯಲ್ಲಿರುವ ಮನೆಗೆ ಬಂದು ಒಬ್ಬಂಟಿಯಾಗಿ ವಾಸವಿದ್ದರೆನ್ನಲಾಗಿದೆ. ಎರ್ಮಾಳ್‌ನ ಸ್ನೇಹಿತನೊಬ್ಬನಿಗೆ ರವಿವಾರ ಕರೆ ಮಾಡಿದ್ದ ದಿನೇಶ್ ಶೆಟ್ಟಿ ಯಾವುದೋ ಕೆಲಸದ ನಿಮಿತ್ತ ಸೋಮವಾರ ಬೇಗ ಬರುವಂತೆ ತಿಳಿಸಿದ್ದರೆನ್ನಲಾಗಿದೆ. ಅದರಂತೆ ಅವರು ಬೆಳಗ್ಗೆ ದಿನೇಶ್‌ರ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಕೃತ್ಯ ಬೆಳಕಿಗೆ ಬಂತೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.