ಉಳ್ಳಾಲ: ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಅಭಿಯಾನ

Update: 2020-07-27 17:39 GMT

ಉಳ್ಳಾಲ: ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಇದರ ವಾರ್ಷಿಕ ಅಂಗವಾಗಿ ರವಿವಾರ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಉಳ್ಳಾಲ ಪೇಟೆ ಪರಿಸರದಲ್ಲಿ ನಡೆಯಿತು.

ಉಳ್ಳಾಲದಲ್ಲಿ ಪ್ರತೀ ವರ್ಷದ ಮಳೆಗಾಲದಲ್ಲಿ ಡೆಂಗಿ ಮತ್ತು ಮಲೇರಿಯಾ ರೋಗಗಳ ಹಾವಳಿ ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಲ್ಲಿ ಇದ್ದಂತಹ ಕಸಗಳನ್ನು ಮತ್ತು ತ್ಯಾಜ್ಯ ನೀರುಗಳನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಹುಡಿಯನ್ನು ಸಿಂಪಡಿಸಿ ಸ್ವಚ್ಛಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, "ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಸಂಘವು ಕಳೆದ ವಾರ ಕೊರೋನ ಜನಜಾಗೃತಿ ಹಾಗೂ ಮಾಸ್ಕ್ ವಿತರಣೆ ಮಾಡಿ ಇವತ್ತು ನಮ್ಮ ಊರು ಸ್ವಚ್ಛತಾ ಅಭಿಯಾನಕ್ಕೆ ಕಾರ್ಯಕ್ರಮ ಮಾಡುವುದರಿಂದ ಜನರ ರೋಗದ ಬಗ್ಗೆ ಕಾಳಜಿ ವಹಿಸಿಕೊಂಡು ಉತ್ತಮ ಸೇವೆ ಮಾಡಿದ್ದಾರೆ” ಎಂದರು.

ಉಳ್ಳಾಲ ವಿಟಲ್ ದಾಸ್ ಮಲ್ಯ ಮಾತನಾಡಿ, ಉಳ್ಳಾಲ ಪೇಟೆ ಯುವಕರ ಸೇವೆ ಜನಮೆಚ್ಚಿದ ಸೇವೆ. ಇದಕ್ಕೆ ನಮ್ಮ ಪ್ರೋತ್ಸಾಹ ಇದೆ ಎಂಬ ಆಶ್ವಾಸನೆ ನೀಡಿದರು.

ಉಳ್ಳಾಲ ನಗರಸಭೆ ಮಾಜಿ ಸದಸ್ಯ ಫಾರೂಕ್ ಉಳ್ಳಾಲ್ ಮಾತನಾಡಿ, "ಪೇಟೆ ಯುವಕರ ಪರಿಸರ ಸ್ವಚ್ಛತಾ ಅಭಿಯಾನ ಇತರ ಮಸೀದಿ ಮತ್ತು ಪರಿಸರದ ಯುವಕರಿಗೆ ಪ್ರೇರಣೆಯಾಗಾಲಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಉಳ್ಳಾಲ ಪೇಟೆ ಮಸೀದಿಯ ಅಧ್ಯಕ್ಷ ಮೋಹಿದ್ದೀನ್ ಹಾಜಿ, ಉಳ್ಳಾಲ ನಗರಸಭೆ ಮಾಜಿ ಸದಸ್ಯ ಪೋಡಿಮೋನು, ಪೇಟೆ ಮಸೀದಿಯ ಮುಖ್ಯ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಕೋಡಿ ಬದ್ರಿಯ ಮಸೀದಿ ಅಧ್ಯಕ್ಷ ಹಮೀದ್, ಯು.ಪಿ ಮುಹಮ್ಮದ್ ಬಾವ, ರಝಾಕ್, ಬುಸ್ತಾನುಲ್ ಉಲೊಮ್ ಯೂತ್ ಅಸೋಸಿಯೇಷನ್ ಕಾರ್ಯದರ್ಶಿ ಅಝೀಮ್, ಜತೆ ಕಾರ್ಯದರ್ಶಿ ಶರಾಫತ್, ಖಜಾಂಜಿ ಆಫ್ರಿದ್, ಸದಸ್ಯ ಮುಸ್ತಫಾ ಕೊಟ್ಟಾರ, ಇರ್ಷಾದ್, ಇರ್ಫಾನ್, ಸಹಾಲ್, ಫಯಾಜ್ ಕೊಟ್ಟಾರ, ಮೆಹರಾಲಿ ಬಸ್ತಿಪಡ್ಪು, ಬದ್ರುದ್ದೀನ್, ಝೈದ್, ಅಝರ್ ಉಪಸ್ಥಿತರಿದ್ದರು. ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ತೌಸೀಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News