×
Ad

ಕಾಸರಗೋಡು: ಕೋವಿಡ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಿರತ ನಾಲ್ವರು ಕಾರ್ಮಿಕರಿಗೆ ಸೋಂಕು

Update: 2020-07-28 12:47 IST

ಕಾಸರಗೋಡು, ಜು.28: ಚಟ್ಟಂಚಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ಕೋವಿಡ್-19 ಆಸ್ಪತ್ರೆಯ ಕಾಮಗಾರಿ ನಡೆಸುತ್ತಿರುವ ನಾಲ್ವರು ಕಾರ್ಮಿಕರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಸುಮಾರು 60ರಷ್ಟು ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ.

ಸೋಂಕಿತರಲ್ಲಿ ಮೂವರು ಒಡಿಶಾ ಹಾಗೂ ಓರ್ವ ಆಂಧ್ರ ಪ್ರದೇಶ ನಿವಾಸಿಗಳಾಗಿದ್ದಾರೆ. ಇವರಿಗೆ ಸಂಪರ್ಕದಿಂದ ಸೋಂಕು ತಗಲಿದೆ ಎಂದು ತಿಳಿದುಬಂದಿದೆ.

ಕಾಸರಗೋಡಿನಿಂದ 8 ಕಿ.ಮೀ. ದೂರದ ಚಟ್ಟಂಚಾಲ್ ನಲ್ಲಿ ಟಾಟಾ ಗ್ರೂಪ್ ಹಾಗೂ ಕೇರಳ ಸರಕಾರದ ಸಹಯೋಗದಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಆಸ್ಪತ್ರೆಯನ್ನು ಜುಲೈ ತಿಂಗಳ ಅಂತ್ಯಕ್ಕೆ ಉದ್ಘಾಟನೆ ಮಾಡಲು ನಿರ್ಧರಿಸಲಾಗಿತ್ತು. ಈ ನಡುವೆ ಕಾರ್ಮಿಕರಿಗೆ ಸೋಂಕು ಪತ್ತೆಯಾಗಿರುವುದು ಆಸ್ಪತ್ರೆ ಲೋಕಾರ್ಪಣೆ ವಿಳಂಬವಾಗಬಹುದೇ ಸಂದೇಹ ಮೂಡತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News