ಅಧಿವೇಶನ ಕರೆಯುವುದು ನಮ್ಮ ಹಕ್ಕು: ರಾಜಸ್ಥಾನ ಸಚಿವ ಹರೀಶ್ ಚೌಧರಿ
Update: 2020-07-28 14:09 IST
ಜೈಪುರ, ಜು.28: ಶುಕ್ರವಾರ(ಜು.31)ದಿಂದ ಅಧಿವೇಶನ ನಡೆಸಬೇಕೆಂಬ ಮನವಿಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವ ಮರುದಿನ ಸಂಪುಟ ಸಭೆ ನಡೆಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಅಧಿವೇಶನ ಕರೆಯುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದೆ.
"ನಾವು ರಾಜ್ಯಪಾಲರ ಕಳಕಳಿಗೆ ಪ್ರತ್ಯುತ್ತರವನ್ನು ರೂಪಿಸಿದ್ದೇವೆ. ಅಧಿವೇಶನ ಕರೆಯುವುದು ನಮ್ಮ ಹಕ್ಕು. ಅಧಿವೇಶನ ಹೇಗೆ ನಡೆಯಲಿದೆ ಎಂಬುದು ಸ್ಪೀಕರ್ ಅವರ ಅಧಿಕಾರ. ಜುಲೈ 31ರಂದೇ ನಾವು ಅಧಿವೇಶನ ನಡೆಯಬೇಕೆಂದು ಬಯಸಿದ್ದೇವೆ'' ಎಂದು ರಾಜಸ್ಥಾನದ ಸಚಿವ ಹರೀಶ್ ಚೌಧರಿ ಸಂಪುಟ ಸಭೆಯ ಬಳಿಕ ಎನ್‌ಡಿಟಿವಿಗೆ ತಿಳಿಸಿದರು.
"ರಾಜ್ಯಪಾಲರು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಉತ್ತರವಿದೆ. ಅಸಾಧಾರಣ ಸಂದರ್ಭಗಳು ಯಾವುವು. ದೇಶದಲ್ಲಿ ಇತರೆಡೆ ಅಧಿವೇಶಗಳು ನಡೆಯುತ್ತಿವೆ. ಸಂಪುಟದ ಪ್ರಸ್ತಾವನೆಯನ್ನು ಇಂದು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು'' ಎಂದು ಸಂಪುಟ ಸಚಿವರು ತಿಳಿಸಿದರು.