ಮೂರು ತಿಂಗಳ ಬಳಿಕ ಮುಂಬೈನಲ್ಲಿ ದೈನಂದಿನ ಕೊರೋನ ಕೇಸ್‌ನಲ್ಲಿ ಕುಸಿತ
ಮುಂಬೈ, ಜು.28:ದೇಶದಲ್ಲಿ ಅತ್ಯಂತ ಹೆಚ್ಚು ಕೊರೋನ ಪೀಡಿತವಾಗಿರುವ ಮಹಾರಾಷ್ಟ್ರ ರಾಜ್ಯದ ಮುಂಬೈ ನಗರದಲ್ಲಿ ಮೂರು ತಿಂಗಳ ಬಳಿಕ ದೈನಂದಿನ ಕೊರೋನ ವೈರಸ್ ಸಂಖ್ಯೆಯಲ್ಲಿ ಕುಸಿತವಾಗಿದೆ. ಇದೇ ಮೊದಲ ಬಾರಿ ಮುಂಬೈನಲ್ಲಿ ಸೋಮವಾರ ಒಂದೇ ದಿನ 8,776 ಜನರ ಕೊರೋನ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಸುಮಾರು 700 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇದು ಕಳೆದ 100 ದಿನಗಳಲ್ಲಿ ಕನಿಷ್ಠ ಪ್ರಕರಣವಾಗಿದೆ.
ರವಿವಾರ ಮುಂಬೈನಲ್ಲಿ ನಡೆಸಲಾಗಿರುವ ಕೋವಿಡ್-19 ಪರೀಕ್ಷೆಯಲ್ಲಿ 1,033 ಪ್ರಕರಣ ಪಾಸಿಟಿವ್ ಆಗಿದ್ದವು. ನಗರದಲ್ಲೀಗ ದ್ವಿಗುಣಗೊಳ್ಳುವ ದರ 68 ದಿನಗಳಾಗಿದ್ದು, ಚೇತರಿಕೆಯ ದರ ಶೇ.73.
ಸೋಮವಾರ ಮಹಾರಾಷ್ಟ್ರ ರಾಜ್ಯದಾದ್ಯಂತ 7,924 ಕೇಸ್‌ಗಳು ವರದಿಯಾಗಿದ್ದು, 227 ಮಂದಿ ಬಲಿಯಾಗಿದ್ದಾರೆ. ಮುಂಬೈನಲ್ಲಿ 1021 ಪ್ರಕರಣಗಳು ಹಾಗೂ 39 ಸಾವು ಸಂಭವಿಸಿದೆ. ಮುಂಬೈವೊಂದರಲ್ಲೇ ಈ ತನಕ 6,132 ಜನರು ಮೃತಪಟ್ಟಿದ್ದಾರೆ. ಮುಂಬೈನಲ್ಲಿ 1,10,182 ಕೊರೋನ ಕೇಸ್‌ಗಳಿದ್ದು, ಕೇವಲ 21,812 ಸಕ್ರಿಯ ಪ್ರಕರಣಗಳು.