ಮುಂಡಗೋಡ: ಕುರಿಗಳ ಕಳ್ಳತನ; ಆರೋಪಿಗಳ ಬಂಧನ

Update: 2020-07-28 12:09 GMT

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಹೊಲದ ಶೆಡ್ಡನಲ್ಲಿದ್ದ 12 ಕುರಿಗಳನ್ನು  ಕಳ್ಳತನ ಮಾಡಿದ ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ

ಪಟ್ಟಣದ ಗಾಂಧಿ ನಗರದ ವಸಂತ ಕೊರವರ, ಆನಂದನಗರದ ಮಂಜು ನವಲೆ, ಸಿದ್ದಾರೂಡ ದೊಡ್ಡಮನಿ ಮತ್ತು ಹಳೂರ ಓಣಿಯ ಇಬ್ರಾಹಿಂ ಲಕ್ಷ್ಮೇಶ್ವರ ಬಂದಿತ ಆರೋಪಿಗಳಾಗಿದ್ದಾರೆ.

ನಿಖಿಲ ಇಂಗಳಕಿ  ಎಂಬುವರ ಹೊಲದ ಶೆಡ್ಡನಲ್ಲಿದ್ದ ಕುರಿಗಳು ಜುಲೈ 10ಮತ್ತು 11 ರ ಮಧ್ಯದ ಅವಧಿಯಲ್ಲಿ ಕಳವಾಗಿರುವ ಕುರಿತು ರವಿವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಪಿಐ ಪ್ರಭುಗೌಡ ಡಿ.ಕೆ. ಮತ್ತು ಸಿಬ್ಬಂದಿ ಬೆಳಗ್ಗೆ4.30 ಕ್ಕೆ ಗಸ್ತು ತಿರುಗುತ್ತಿದ್ದಾಗ ಅಂದಲಗಿ ಕ್ರಾಸ್ ಬಳಿ ಶಿರಸಿ ಕಡೆಗೆ ಹೋಗುತ್ತಿದ್ದ ಬುಲೆರೋ ಪಿಕ್‍ಅಪ್ ವಾಹನ ತಡೆದು ಅದರಲ್ಲಿದ್ದ ಎರಡು ಕುರಿಗಳ ಕುರಿತು ವಿಚಾರಣೆ ನಡೆಸಿದಾಗ  ಕಳವು ಮಾಡಿರುವ ಕುರಿಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಬಂದಿತ ಆರೋಪಿಗಳನ್ನು ವಿಚಾರಿಸಿದಾಗ ಶಿಗ್ಗಾಂವಿ ತಾಲೂಕಿನ ಬಸವನಕೊಪ್ಪ ಗ್ರಾಮದ ಹೊಸೂರು ಪಂಚಾಯತದ ಚೂರಿ ಮ್ಯಾಂಗೋ ಫಾರ್ಮ್ ನಲ್ಲಿ ಕಳ್ಳತನ ಮಾಡಿದ 12 ಕುರಿಗಳನ್ನು ಇಟ್ಟಿದ್ದರು ಎಂದು ಒಪ್ಪಿಕೊಂಡಿದ್ದಾರೆ. 10 ಕುರಿಗಳನ್ನು ಹಳೂರ ಓಣಿಯ ಇಬ್ರಾಹಿಂ ಲಕ್ಷ್ಮೇಶ್ವರ ಗೆ 30 ಸಾವಿರ ರೂಗೆ  ಮಾರಾಟ ಮಾಡಿರುವುದಾಗಿ ಹಾಗೂ ತಡಸ ಮತ್ತು ಶಿಗ್ಗಾಂವ ಕಡೆಗಳಲ್ಲಿಯೂ ಕುರಿಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News