ಪಡುಬಿದ್ರಿ: ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ

Update: 2020-07-28 12:45 GMT

ಪಡುಬಿದ್ರಿ: ಯಾವುದೇ ಶಾಂತಿ ಭಂಗಕ್ಕೆ ಎಡೆಕೊಡದಂತೆ, ಕೊರೋನ ಕುರಿತಾದ ಮುಂಜಾಗ್ರತಾ ಕ್ರಮಗಳನ್ನು ಅಗತ್ಯವಾಗಿ ಕೈಗೊಂಡು ಬಕ್ರೀದ್ ಹಬ್ಬವನ್ನು ಆಚರಿಸಬೇಕು ಎಂದು ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ಕರೆ ನೀಡಿದರು. 

ಈದುಲ್ ಅಝ್ ಹಾ ಆಚರಣೆಯ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯ ವಿವಿಧ ಮಸೀದಿಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

ಬಕ್ರೀದ್ ಹಬ್ಬದ ಪ್ರಯುಕ್ತ ಎರಡು ದಿನಗಳ ಸಾನಿಟೈಸ್‍ ನಡೆಸಬೇಕು. ಪ್ರವೇಶ ದ್ವಾರದಲ್ಲಿ ದೇಹದ ತಾಪಮಾನ ಪರಿಶೀಲಿಸಿ ಮಸೀದಿಯೊಳಕ್ಕೆ ಬಿಡಬೇಕು.  ಮಸೀದಿಯಲ್ಲಿ 50 ಮಂದಿಯ ಒಳಗೇ ಸೀಮಿತಗೊಳಿಸಿ ಹಬ್ಬವನ್ನು ಆಚರಿಸಬೇಕು. ಯಾವುದೇ ಧಾರ್ಮಿಕಾಚರಣೆಗಳಿಗೆ ಅಡೆತಡೆಗಳಿಲ್ಲ. ಮಸೀದಿಯಲ್ಲಿ ನಮಾಜಿನ ವೇಳೆ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಎಳೆಯ ಮಕ್ಕಳಿಗೆ ಪ್ರವೇಶ ನೀಡದೇ 10ವರ್ಷದ ಬಳಿಕ ಹಾಗೂ 60ವರ್ಷದೊಳಗಿನವರಿಗೆ ಮಾತ್ರ ಪ್ರವೇಶಾವಕಾಶ ನೀಡಬೇಕು. ಅಂತೆಯೇ ನಮಾಜಿನಲ್ಲಿ ಭಾಗವಹಿಸಿರುವ ಮಂದಿಯ ವಿವರಗಳನ್ನು ಸಂಗ್ರಹಿಸಿ ಕೊರೋನ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಅವಶ್ಯ ನೀಡಬೇಕೆಂದು ದಿಲೀಪ್ ವಿವರಿಸಿದರು.

ಮುಖಂಡರಾದ ಎಂ. ಪಿ. ಮೊಯ್ದಿನಬ್ಬ, ಶಬ್ಬೀರ್ ಹುಸೈನ್, ಬುಡಾನ್ ಸಾಹೇಬ್, ಪಿ.ಕೆ. ಮಯ್ಯದ್ದಿ ಹಾಜಿ ಲಚ್ಚಿಲ್, ಸನಾ ಇಬ್ರಾಹಿಂ, ಅಬ್ದುಲ್ ಹಮೀದ್ ಮಿಲಾಫ್ ಇಬ್ರಾಹಿಂ ತವಕ್ಕಲ್ ಉಚ್ಚಿಲ, ಇಸ್ಮಾಯಿಲ್ ಮಾಸ್ಟರ್, ಆಸೀಫ್ ಆಪದ್ಭಾಂಧವ, ಉಚ್ಚಿಲ, ಎರ್ಮಾಳು, ಪಲಿಮಾರು, ಮುದರಂಗಡಿಗಳ ಮಸೀದಿಗಳ ಸಮಿತಿ ಮುಖ್ಯಸ್ಥರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News