ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 47 ಮಂದಿಗೆ ಕೊರೋನ ಸೋಂಕು ದೃಢ

Update: 2020-07-28 12:51 GMT

ಕಾರವಾರ,ಜು.28:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 47 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 1832 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ ಕಾರವಾರ 8, ಹೊನ್ನಾವರ 5, ಭಟ್ಕಳ 4, ಶಿರಸಿ 9, ಸಿದ್ದಾಪುರ 1, ಮುಂಡಗೋಡ 5, ಹಳಿಯಾಳದಲ್ಲಿ 15 ಪ್ರಕರಣಗಳು ದಾಖಲಾಗಿದೆ.

ಜಿಲ್ಲೆಯಲ್ಲಿ  ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.  ಜಿಲ್ಲೆಯಲ್ಲಿ ಮಂಗಳವಾರ 85 ಜನರು ಗುಣಮುಖರಾಗಿ ಬಿಡುಗುಡೆಯಾಗಿದ್ದಾರೆ.  ಇಂದು ಕಾರವಾರ 7, ಕುಮಟಾ 19, ಹೊನ್ನಾವರ 3, ಶಿರಸಿ 22, ಸಿದ್ದಾರಪುರ 7, ಹಳಿಯಾಳ 25, ಜೊಯಿಡಾದಲ್ಲಿ 2 ಜನರು ಗುಣಮುಖರಾಗಿದ್ದಾರೆ. ಪತ್ತೆಯಾದ ಪ್ರಕರಣಗಳಿಗಿಂತ ಹೆಚ್ಚು ಜನರು ಬಿಡುಗಡೆಯಾಗಿದ್ದು ಜನರಲ್ಲಿ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಗುಣಮುಖರಾದವರ ಪೈಕಿ ಕಾಋವಾರ 74, ಅಂಕೋಲಾ 59, ಕುಮಟಾ 177, ಹೊನ್ನಾವರ 96, ಭಟ್ಕಳ 268, ಶಿರಸಿ 93, ಸಿದ್ದಾಪುರ 23, ಯಲ್ಲಾಪುರ 70, ಮುಂಡಗೋಡ 67, ಹಳಿಯಾಳ 173 ಹಾಗೂ ಜೊಯಿಡಾದಲ್ಲಿ 10 ಜನರ ಗುಣಮುಖರಾಗಿದ್ದಾರೆ.

ಇಬ್ಬರು ಸೋಂಕಿತರ ಸಾವು:

ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆಗೆ ಒಳಗಾಗಿದ್ದವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಕಾರವಾರ 65 ವರ್ಷದ ವೃದ್ಧೆ ಹಾಗೂ ಹೊನ್ನಾವರ ಮೂಲದ 78 ವರ್ಷದ ವೃದ್ಧ ಸೋಂಕಿನಿಂದ ಬಲಿಯಾಗಿದ್ದು, ಉತ್ತರ ಕನ್ನಡದಲ್ಲಿ ಸೋಂಕಿನಿಂದ ಮೃತಪಟ್ಟವರ  ಸಾವಿನ ಸಂಖ್ಯೆ 19ಕ್ಕೆ ಏರಿದಂತಾಗಿದೆ. ಈವರೆಗೆ ಜಿಲ್ಲೆಯಲ್ಲಿ ಕಾರವಾರ 3, ಅಂಕೋಲಾ, ಯಲ್ಲಾಪುರ, ಮುಂಡಗೋಡ, ಹೊನ್ನವರ ತಲಾ 1, ಭಟ್ಕಳ 6, ಶಿರಸಿ 3, ಹಳಿಯಾಳದಲ್ಲಿ 3 ಸಾವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಸ್ತುತ  673 ಪ್ರಕರಣಗಳು ಸಕ್ರಿಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News