ಮಂಗಳೂರು: ಕೈಗಾರಿಕಾ ಘಟಕಗಳ ನೋಂದಣಿ ಮಾಡಲು ಸೂಚನೆ
Update: 2020-07-28 18:52 IST
ಮಂಗಳೂರು, ಜು.28: ಕೇಂದ್ರ ಕೈಗಾರಿಕಾ ಘಟಕಗಳ ನೋಂದಣಿಯು ಈಗಾಗಲೇ ಆರಂಭವಾಗಿದೆ.
ಆನ್‌ಲೈನ್ ಮೂಲಕ (https://udyamregistration.gov.in) ಲಿಂಕ್ ಬಳಸಿ ನೋಂದಣಿ ಪ್ರಮಾಣಪತ್ರ ಪಡೆಯಬಹುದಾಗಿದೆ. ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಉತ್ಪಾದನೆ ಪ್ರಾರಂಭಿಸಿದ ನಂತರ ಎಲ್ಲ ಕೈಗಾರಿಕಾ ಘಟಕಗಳು ಆನ್‌ಲೈನ್ ನೋಂದಣಿ ಮಾಡಬಹುದಾಗಿದೆ. ಜು.1ಕ್ಕಿಂತ ಹಿಂದೆ ಉದ್ಯೋಗ್ ಆಧಾರ್, ಎಸ್‌ಎಸ್‌ಐ ನೋಂದಣಿ ಪ್ರಮಾಣಪತ್ರ ಅಥವಾ (EM-II) ನೋಂದಣಿ ಪಡೆದವರು ಕೂಡ ಉದ್ಯಮ ನೋಂದಣಿ ಪಡೆಯವ ಅಗತ್ಯವಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.