×
Ad

4 ತಿಂಗಳಲ್ಲಿ ಇಪಿಎಫ್‌ ಖಾತೆಯಿಂದ 30,000 ಕೋಟಿ ರೂ. ಹಿಂಪಡೆದ ಜನರು !

Update: 2020-07-28 21:11 IST

ಹೊಸದಿಲ್ಲಿ, ಜು.28: ನಾಲ್ಕು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್)ನಿಂದ ಸುಮಾರು 8 ಮಿಲಿಯನ್ ಪಾವತಿದಾರರು 30,000 ಕೋಟಿ ರೂ.ಯಷ್ಟು ಹಣವನ್ನು ಹಿಂಪಡೆದಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಹಿಂದಿನ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ 2020ರ ಎಪ್ರಿಲ್‌ನಿಂದ ಜುಲೈ 3ನೇ ವಾರದ ನಡುವಿನ ಅವಧಿಯಲ್ಲಿ ಹಣ ಹಿಂದೆಗೆತದ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ಕೊರೋನ ಸೋಂಕಿನಿಂದಾಗಿ ಉದ್ಯೋಗ ನಷ್ಟ, ಸಂಬಳ ಕಡಿತ, ವೈದ್ಯಕೀಯ ವೆಚ್ಚಗಳು ಈ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಇಪಿಎಫ್‌ಒ ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ಇಕನಾನಿಕ್ ಟೈಮ್ಸ್’ ವರದಿ ಮಾಡಿದೆ.

ಇದರಲ್ಲಿ ಸುಮಾರು 3 ಮಿಲಿಯನ್ ಫಲಾನುಭವಿಗಳು ಕೋವಿಡ್ ವಿಶೇಷ ವ್ಯವಸ್ಥೆಯಡಿ 8000 ಕೋಟಿಯಷ್ಟು ಹಣ ಮರಳಿ ಪಡೆದಿದ್ದರೆ, 5 ಮಿಲಿಯನ್‌ನಷ್ಟು ಜನತೆ ವೈದ್ಯಕೀಯ ವೆಚ್ಚದಡಿ 22,000 ಕೋಟಿ ರೂ. ವಾಪಸು ಪಡೆದಿದ್ದಾರೆ ಎಂದು ಇಪಿಎಫ್‌ಒ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News