ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯ ಪರಿಸರ ಸಮಿತಿಗೆ ಭಾರತೀಯ ಹೋರಾಟಗಾರ್ತಿ

Update: 2020-07-28 17:46 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಜು. 28: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಯುವ ನಾಯಕರನ್ನೊಳಗೊಂಡ ತನ್ನ ನೂತನ ಸಲಹಾ ಸಮಿತಿಗೆ ಭಾರತದ ಪರಿಸರ ಹೋರಾಟಗಾರ್ತಿಯೊಬ್ಬರನ್ನು ಸೇರಿಸಿದ್ದಾರೆ. ಈ ಸಲಹಾ ಸಮಿತಿಯು, ಹದಗೆಡುತ್ತಿರುವ ಪರಿಸರ ಬಿಕ್ಕಟ್ಟನ್ನು ನಿಭಾಯಿಸುವ ವಿಚಾರದಲ್ಲಿ ಮಹಾಕಾರ್ಯದರ್ಶಿಗೆ ಸಲಹೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತಾರೆ.

ಗುಟೆರಸ್ ಹೊಸದಾಗಿ ರಚಿಸಿರುವ 'ಯೂತ್ ಅಡ್ವೈಸರಿ ಗ್ರೂಪ್ ಆನ್ ಕ್ಲೈಮೇಟ್ ಚೇಂಜ್'ಗೆ ಜಗತ್ತಿನಾದ್ಯಂತ ಯುವ ಪರಿಸರ ನಾಯಕರನ್ನು ನೇಮಿಸಿದ್ದಾರೆ. ಸಮಿತಿಯಲ್ಲಿ ಈಗಾಗಲೇ ಆರು ಯುವ ನಾಯಕರಿದ್ದು, ಭಾರತದ ಅರ್ಚನಾ ಸೊರೆಂಗ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

''ಅರ್ಚನಾ ಸೊರೆಂಗ್ ವಕಾಲತ್ತು ಮತ್ತು ಸಂಶೋಧನೆಯಲ್ಲಿ ಅನುಭವ ಹೊಂದಿದ್ದಾರೆ. ಅವರು ದೇಶಿ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಮತ್ತು ಸಾಂಸ್ಕತಿಕ ಪದ್ಧತಿಗಳನ್ನು ದಾಖಲಿಸುವ, ಸಂರಕ್ಷಿಸುವ ಮತ್ತು ಮಾನ್ಯತೆ ಒದಗಿಸುವ ಕೆಲಸದಲ್ಲಿ ತೊಡಗಿದ್ದಾರೆ'' ಎಂದು ವಿಶ್ವಸಂಸ್ಥೆಯು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News