ಕಡಬ: ಒಂದೇ ಕುಟುಂಬದ ಆರು ಮಂದಿಗೆ ಕೊರೋನ ಪಾಸಿಟಿವ್

Update: 2020-07-29 06:54 GMT

ಪುತ್ತೂರು, ಜು.29: ಕಡಬ ತಾಲೂಕಿನಲ್ಲಿ ಒಂದೇ ಮನೆಯ 6 ಮಂದಿಯಲ್ಲಿ ಬುಧವಾರ ಕೊರೋನ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಇದಲ್ಲದೇ ಇಂದು ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ 13 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಈ ಪೈಕಿ ಕಡಬ ತಾಲೂಕಿನಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದರೆ, ಪುತ್ತೂರು ತಾಲೂಕಿನಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಪುತ್ತೂರು ತಾಲೂಕಿನ ಮಣಿಕ್ಕರ ನಿವಾಸಿ 78 ವರ್ಷ ವಯಸ್ಸಿನ ವೃದ್ಧ, ಉಪ್ಪಿನಂಗಡಿಯಲ್ಲಿ ಕಾವಲುಗಾರ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ 70 ವರ್ಷ ವಯಸ್ಸಿನ ವೃದ್ಧರೊಬ್ಬರಲ್ಲಿ ಕೊರೋನ ಪ್ರಕರಣ ದೃಢಪಟ್ಟಿದೆ. ಅವರನ್ನು ಈಗಾಗಲೇ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಬ ತಾಲೂಕಿನ ಬೆಳಂದೂರು ರೈಲ್ವೇ ಗೇಟ್ ಬಳಿಯ 65, 43, 28 ವರ್ಷದ ಮಹಿಳೆ, 27, 32 ವರ್ಷದ ಯುವಕ ಹಾಗೂ 6 ವರ್ಷದ ಬಾಲಕ ಸಹಿತ ಒಂದೇ ಮನೆಯ ಆರು ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಬಲ್ಯ ನಿವಾಸಿ 36 ವರ್ಷದ ಮಹಿಳೆ, 37 ವರ್ಷದ ಕೋಣಾಜೆ ಕಡ್ಯ ನಿವಾಸಿ ಪುರುಷ, 41 ವರ್ಷದ ಆಲಂಕಾರು ನಿವಾಸಿ ಪುರುಷನಲ್ಲಿ, 41 ವರ್ಷದ ಚಾರ್ವಕ ನಿವಾಸಿ ಪುರುಷ ಮತ್ತು 39 ವರ್ಷದ ಕಡಬ ನಿವಾಸಿ ಪುರುಷರೊಬ್ಬರಲ್ಲಿ ಕೊರೋನ ದೃಢಪಟ್ಟಿದೆ.

ಈ ತನಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 226 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News