×
Ad

‘ರಫೇಲ್ ತನಿಖಾ ವರದಿಗಳ ನಂತರ ಜಾಹೀರಾತು ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ, ಆದರೆ ಹಿಂಜರಿಯುವುದಿಲ್ಲ’

Update: 2020-07-29 14:06 IST

ಹೊಸದಿಲ್ಲಿ: “ರಫೇಲ್ ಕುರಿತಾದ ತನಿಖಾ ವರದಿಗಳನ್ನು ಪ್ರಕಟಿಸಿದ ನಂತರ The Hindu ಪತ್ರಿಕೆಯ ಜಾಹೀರಾತು ಆದಾಯಕ್ಕೆ ದೊಡ್ಡ ಹೊಡೆತ ಬಿದ್ದು ಪತ್ರಿಕೆ ಇದರಿಂದಾಗಿ  ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೆ ನಾನು ಹಿಂಜರಿಯುವುದಿಲ್ಲ'' ಎಂದು  The Hindu ಪಬ್ಲಿಷಿಂಗ್ ಗ್ರೂಪ್‍ ನ ನಿರ್ದೇಶಕರು ಹಾಗೂ The Hindu ಪತ್ರಿಕೆಯ ಮಾಜಿ ಮುಖ್ಯ ಸಂಪಾದಕರೂ ಆಗಿರುವ ಎನ್ ರಾಮ್ ಹೇಳಿದ್ದಾರೆ.

ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಮೊದಲ ಬ್ಯಾಚಿನ ಐದು ವಿಮಾನಗಳು ಇಂದು ಅಪರಾಹ್ನ ಹರ್ಯಾಣದ ಅಂಬಾಲದಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಬಂದಿಳಿಯಲಿವೆ.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಕುರಿತಂತೆ  The Hindu ಪಬ್ಲಿಷಿಂಗ್ ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

“ಪ್ರಸಕ್ತ ಸಂದರ್ಭ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಪತ್ರಿಕೆಗಳಿಗೆ  ಸಂಕಷ್ಟದ ಕಾಲವಾಗಿದೆ.  ಅದರೆ ಅದೇ ಸಮಯ ಸ್ವತಂತ್ರ ಪತ್ರಿಕೋದ್ಯಮ ನಡೆಸಬೇಕೇ ಅಥವಾ ಆಡಳಿತಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕೇ ಎಂಬುದರ ಕುರಿತು ಪತ್ರಿಕಾ ಸಂಸ್ಥೆಗಳು ನಿರ್ಧರಿಸುವ ಕಾಲವಿದು” ಎಂದು ಅವರು ಹೇಳಿದರು.

ಭಾರತದ ಸಾಂವಿಧಾನಿಕ ಸಂಸ್ಥೆಗಳ ‘ದುರುಪಯೋಗದ' ಕುರಿತೂ ಕಳವಳ ವ್ಯಕ್ತಪಡಿಸಿದ ಎನ್ ರಾಮ್, “ಕೆಲವೊಂದು ಗಮನಾರ್ಹ ತೀರ್ಪುಗಳ ಹೊರತಾಗಿ ಸುಪ್ರೀಂ ಕೋರ್ಟ್  ಸಂಬಂಧಿತ ಬೆಳವಣಿಗೆಗಳು ನಿರಾಶಾದಾಯಕವಾಗಿವೆ. ಅಂತೆಯೇ ಚುನಾವಣಾ ಆಯೋಗದ ನಿರ್ಧಾರಗಳ ಕುರಿತಂತೆಯೂ ಆತಂಕವಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ  ಹಾಗೂ ಭವಿಷ್ಯದ ಉಪಚುನಾವಣೆಗಳಲ್ಲಿ 65 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತ ವ್ಯವಸ್ಥೆ ಒದಗಿಸುವ ಸಲಹೆ ಕೂಡ ಕಳವಳಕಾರಿ, ಇಂತಹ ಕ್ರಮ ಕೈಗೊಂಡಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಅಥವಾ ಅವರನ್ನು ಬಲವಂತಪಡಿಸುವ ಸಾಧ್ಯತೆಗಳಿವೆ'' ಎಂದು ಅವರು ಹೇಳಿದರು.

ಈ ಬಗ್ಗೆ thewire.in ನಡೆಸಿದ ಸಂದರ್ಶನದ ವಿಡಿಯೋ ಕೆಳಗಿದೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News