ಯಕ್ಷಗಾನ ಅಧ್ಯಯನ ಕೇಂದ್ರದಿಂದ ಆ.1ಕ್ಕೆ ಕೃತಿಗಳ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ

Update: 2020-07-29 11:50 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ‌ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ‌ಕೇಂದ್ರ ಇದರ ಆಶ್ರಯದಲ್ಲಿ 'ವೆಬಿನಾರ್' ವಿಶೇಷ ಉಪನ್ಯಾಸ ಮತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಗೂಗಲ್ ಮೀಟ್‌ನಲ್ಲಿ ಆ.1ರಂದು ಶನಿವಾರ 4 ಗಂಟೆಗೆ ನಡೆಯಲಿದೆ.

ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅವರು ಬರೆದಿರುವ ಅರ್ಥಾಯನ ಹಾಗೂ ಒಳದಾರಿಯ ಬೆಳದಿಂಗಳು ಕೃತಿಗಳನ್ನು ಎಡನೀರು‌ ಮಠದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ವಹಿಸಲಿದ್ದಾರೆ.
ಸಹಾಯಕ ಪ್ರಾಧ್ಯಾಪಕ  ಡಾ.ಧನಂಜಯ ಕುಂಬ್ಳೆ ಅವರು ಕೃತಿ ಅವಲೋಕನ ಮಾಡಲಿದ್ದಾರೆ.

'ತಾಳಮದ್ದಳೆ: ಸ್ವತಂತ್ರ ಕಲೆಯಾಗಬಹುದೇ?' ಎಂಬ ವಿಷಯದಲ್ಲಿ  ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಹಾಗೂ ಕಾರ್ಯಕ್ರಮ ವೀಕ್ಷಣೆಗಾಗಿ ಗೂಗಲ್ ಮೀಟ್ ನಲ್ಲಿ https://meet.google.com/wkk-shxs-kex ಲಿಂಕನ್ನು ಬಳಸಬಹುದಾಗಿದೆ ಎಂದು ಯಕ್ಷಗಾನ  ಕೇಂದ್ರದ ನಿರ್ದೇಶಕರಾದ‌ ಪ್ರೊ.ಶ್ರೀಪತಿ‌ ಕಲ್ಲೂರಾಯ ಅವರು ಪ್ರಕಟ‌ನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News