ಬಕ್ರೀದ್‌: ಭದ್ರತೆ ಒದಗಿಸಲು ಮನವಿ

Update: 2020-07-29 13:04 GMT

ಮಂಗಳೂರು, ಜು.29: ಕರಾವಳಿಯಾದ್ಯಂತ ಜು.31ಕ್ಕೆ ಬಕ್ರೀದ್ ಆಚರಿಸಲ್ಪಡುತ್ತಿದೆ. ಪ್ರಾಣಿ ಬಲಿದಾನ ನೀಡುವುದು ಈ ಹಬ್ಬದ ಪ್ರಮುಖ ಅಂಶವಾಗಿದೆ. ಇತ್ತೀಚೆಗೆ ಜಿಲ್ಲಾದ್ಯಂತ ಸಂಘಪರಿವಾರದ ಗೂಂಡಾಗಳು ಪಶು ಸಂಗೋಪನೆ ಇಲಾಖೆಯ ಪರವಾನಿಗೆ ಇದ್ದರೂ ಕೂಡ ಜಾನುವಾರು ಸಾಗಾಟದ ಹೆಸರಿನಲ್ಲಿ ಮಾರಕಾಯುಧಗಳಿಂದ ದಾಳಿ ನಡೆಸುತ್ತಿರುವ ಘಟನೆಗಳು ನಡೆಯುತ್ತಾ ಇದೆ. ಹಾಗಾಗಿ ಬಕ್ರೀದ್ ಸಂದರ್ಭ ಪ್ರಾಣಿ ಬಲಿಗೆ ಅಡ್ಡಿಯಾಗದಂತೆ ಮತ್ತು ಜಾನುವಾರು ಸಾಗಾಟಗಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಎಸ್‌ಡಿಪಿಐ ಜಿಲ್ಲಾ ಶಾಹುಲ್ ಎಸ್‌ಎಚ್ ಮನವಿ ಮಾಡಿದ್ದಾರೆ.

ಕಳೆದೊಂದು ತಿಂಗಳಿನಿಂದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲ್ಲೂಕಿನ ಹಲವು ಕಡೆಗಳಲ್ಲಿ ಗೋಸಾಗಾಟಗಾರರನ್ನು ಗುರಿಯಾಗಿಸಿ ಸಂಘಪರಿವಾರದ ಗೂಂಡಾಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಆದರೆ ಪೊಲೀಸರು ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದ್ದರಿಂದ ಅಂತಹ ಘಟನೆಗಳು ಪುನರಾವರ್ತನೆಯಾಗುತ್ತಲೇ ಇದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News