ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ 75 ಮಂದಿಗೆ ಕೊರೋನ ಪಾಸಿಟಿವ್

Update: 2020-07-29 13:26 GMT

ಕಾರವಾರ,ಜು.29: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 75 ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ 1907 ಪ್ರಕರಣಗಳು ದಾಖಲಾಗಿದೆ. 

ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರ 6, ಅಂಕೋಲಾ 6, ಕುಮಟಾ 1, ಹೊನ್ನಾವರ 3, ಭಟ್ಕಳ 4, ಶಿರಸಿ 9, ಯಲ್ಲಾಪುರ 1, ಮುಂಡಗೋಡ 7, ಹಳಿಯಾಳ 36 ಹಾಗೂ ಜೊಯಿಡಾದಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.  

ಅದರಂತೆ ಕೊರೋನ ಸೋಂಕಿತರ ಚಿಕಿತ್ಸೆಗೆ ಒಳಗಾಗಿದ್ದ 107 ಜನರು ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನೂರಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದರಿಂದ ಜನರು ಸಮಾಧಾನ ವ್ಯಕ್ತಪಡಿಸುವಂತಾಗಿದೆ. ಬಿಡುಗಡೆಯಾದವರ ಪೈಕಿ ಜಿಲ್ಲೆಯ ಕಾರವಾರ 1, ಅಂಕೋಲಾ 3, ಕುಮಟಾ 10, ಭಟ್ಕಳ 15, ಹಳಿಯಾಳ 78 ಜನರು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 1217 ಜನರು ಗುಣಮುಖರಾಗಿದ್ದು ಕಾರವಾರ 75, ಅಂಕೋಲಾ 62, ಕುಮಟಾ 187, ಹೊನ್ನಾವರ 96, ಭಟ್ಕಳ 283, ಶಿರಸಿ 93, ಸಿದ್ದಾಪುರ 23, ಯಲ್ಲಾಪುರ 70, ಮುಂಡಗೋಡ 67, ಹಳಿಯಾಳ 251 ಹಾಗೂ ಜೊಯಿಡಾದಲ್ಲಿ 10 ಜನರು ಗುಣಮುಖರಾಗಿದ್ದಾರೆ. 

ಮೂವರು ಮೃತ್ಯು: ಕೊರೊನಾ ಸೋಂಕಿತರ ಸಂಖ್ಯೆ ದಿನೆ ದಿನೇ ಏರಿಕೆಯಾಗುತ್ತಿದ್ದು ಸೋಂಕಿನಿಂದ ಸಾವಿನ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 
ಜಿಲ್ಲೆಯ ಅಂಕೋಲಾ 1, ಹಾಗೂ ಹೊನ್ನಾವರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಟ್ಟೂ ಸಾವಿನ ಸಂಖ್ಯೆ 21ಕ್ಕೆ ಏರಿದ್ದು ಕಾರವಾರ 3, ಅಂಕೋಲಾ 2, ಹೊನ್ನಾವರ 2, ಭಟ್ಕಳ 6, ಶಿರಸಿ 3, ಯಲ್ಲಾಪುರ 1, ಮುಂಡಗೋಡ 1,  ಹಳಿಯಾಳದಲ್ಲಿ 3 ಜನ ಮೃತಪಟ್ಟಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 1907 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಹಳಿಯಾಳ (ದಾಂಡೇಲಿ)ದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದರಿಂದ ಹಳಿಯಾಳ ತಾಲೂಕಿನಲ್ಲಿ ಆತಂಕದ ಸ್ಥಿತಿ ಇದೆ. ಹಳಿಯಾಳ ತಾಲೂಕಿನಲ್ಲೇ 483 ಪ್ರಕರಣಗಳು ದಾಖಲಾಗಿದೆ. ಅದರಂತೆ ಕಾರವಾರ 160, ಅಂಕೋಲಾ 98, ಕುಮಟಾ 218, ಹೊನ್ನಾವರ 128, ಭಟ್ಕಳ 400, ಶಿರಸಿ 181, ಸಿದ್ದಾಪುರ 32, ಯಲ್ಲಾಪುರ 90. ಮುಂಡಗೋಡ 100. ಜೊಯಿಡಾದಲ್ಲಿ 17 ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News