×
Ad

ಮಲ್ಲೂರು: ಸ್ಪಾಟ್ ನ್ಯೂಸ್ ಗ್ರೂಪ್‌ನಿಂದ ಸನ್ಮಾನ

Update: 2020-07-29 19:11 IST

ಮಂಗಳೂರು, ಜು.29: ಕೊರೋನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀಪತಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಲ್ಲೂರು ಗ್ರಾಮದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಆರೆನ್ ಡಿಸಿಲ್ವಾ ಬದ್ರಿಯಾ ನಗರ, ಸಬೀಹಾ ಫಾತಿಮಾ ಉದ್ದಬೆಟ್ಟು, ಪ್ರಜ್ಞಾ ದೆಮ್ಮಲೆ, ರಕ್ಷಾ ಉದ್ದಬೆಟ್ಟು ಹಾಗೂ ಐಎಚ್‌ಎಂಒ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಎನ್‌ಪಿ ಮುಹಮ್ಮದ್ ಹನೀಫ್ ಮಲ್ಲೂರು ಅವರನ್ನು ಮಲ್ಲೂರಿನ ಸ್ಪಾಟ್ ನ್ಯೂಸ್ ಗ್ರೂಪ್‌ನಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಸಾಧಕರನ್ನು ತಾಪಂ ಮಾಜಿ ಸದಸ್ಯ ಎನ್‌ಇ ಮುಹಮ್ಮದ್, ಮಲ್ಲೂರು ಗ್ರಾಪಂನ ನಿಕಟಪೂರ್ವ ಅಧ್ಯಕ್ಷ ಎಂಕೆ ಯೂಸುಫ್, ಶರೀಫ್ ಕಲಾಯಿ, ಡಿ. ಅಹ್ಮದ್ ಆಲಿಯಬ್ಬ, ನವಾಝ್ ಕೆಬಿಆರ್ ಉಳಾಯಿಬೆಟ್ಟು ಸನ್ಮಾನಿಸಿದರು. ಈ ಸಂದರ್ಭ ನಿಝಾಮುದ್ದೀನ್ ಚಿಕ್ಕಮಗಳೂರು, ಎಂಐ ಶರೀಫ್ ಮಲ್ಲೂರು ಉಪಸ್ಥಿತರಿದ್ದರು.

ಪತ್ರಕರ್ತ ಜಬ್ಬಾರ್ ಮಲ್ಲೂರು ಸ್ವಾಗತಿಸಿದರು. ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News