‘ಐಎಲ್‌ಐ, ಸಾರಿ ಪ್ರಕರಣಗಳ ವರದಿ ಸಲ್ಲಿಸದಿದಲ್ಲಿ ನೊಂದಣಿ ರದ್ದು’

Update: 2020-07-29 13:52 GMT

ಉಡುಪಿ, ಜು.29: ಕೊರೋನ ವೈರಸ್ ರೋಗದ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು ಸಾರಿ (ಉಸಿರಾಟ ಸಮಸ್ಯೆ), ಐಎಲ್‌ಐ (ಶೀತಜ್ವರ ಪ್ರಕರಣ), ಕೋವಿಡ್ ಶಂಕಿತರ ವರದಿಗಳನ್ನು -https://kpme.karnataka.tech- ಮೂಲಕ ಪ್ರತಿ ದಿನ ವರದಿ ಮಾಡುವುದು ಅಗತ್ಯವಾಗಿದ್ದು, ಈ ಬಗ್ಗೆ ತರಬೇತಿ ನೀಡಲಾಗಿದೆ.

ಯೂಸರ್ ನೇಮ್ ಹಾಗೂ ಪಾಸ್‌ವರ್ಡ್‌ಗಳನ್ನು ನೀಡಿದ್ದರೂ ಸಹ ವರದಿ ಮಾಡದ ಆಸ್ಪತ್ರೆಗಳ ವಿರುದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಎಚ್ಚರಿಕೆ ನೋಟಿಸ್ ನೀಡಿದ್ದರೂ ವರದಿ ವಾಡದೇ ಇರುವುದು ಕಂಡು ಬಂದಿದೆ.

ಆದ್ದರಿಂದ ಇಂಥಹ ಆಸ್ಪತ್ರೆಗಳು ತಕ್ಷಣವೇ ವರದಿ ಮಾಡಬೇಕು. ವರದಿ ಮಾಡದೇ ಇದ್ದಲ್ಲಿ ಸಂಸ್ಥೆಯ ನೊಂದಣೆಯನ್ನು ಕೆಪಿಎಂಇ ಕಾಯ್ದೆಯಂತೆ ರದ್ದುಗೊಳಿಸಲಾಗುವುದು ಎಂದು ಉಡುಪಿ ಕೆಪಿಎಂಇ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News