×
Ad

ಜು.31: ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಈದ್ ನಮಾಝ್

Update: 2020-07-29 19:39 IST

ಉಡುಪಿ, ಜು.29: ಈ ಬಾರಿ ಕೊರೋನ ಸಂದರ್ಭದಲ್ಲಿ ಆಚರಿಸಲಾಗುವ ಈದುಲ್ ಅಝ್ ಹಾ (ಬಕ್ರಿದ್ ಹಬ್ಬ) ವಿಶೇಷ ಸಾಮೂಹಿಕ ನಮಾಝ್‌ನ್ನು ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಸರಕಾರದ ಮಾರ್ಗಸೂಚಿಯಂತೆ ನಿರ್ವ ಹಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಎಲ್ಲ ಮಸೀದಿಗಳ ಆಡಳಿತ ಕಮಿಟಿ ಸಭೆ ಕರೆದು ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದು, ಬಹುತೇಕ ಮಸೀದಿ ವ್ಯಾಪ್ತಿಯಲ್ಲಿ 50ಕ್ಕಿಂತ ಹೆಚ್ಚು ಕುಟುಂಬಗಳು ಇರುವುದರಿಂದ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಬ್ರಹ್ಮಗಿರಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಬೆಳಗ್ಗೆ 6.30 ಮತ್ತು 7 ಗಂಟೆಯ ಎರಡು ಬ್ಯಾಚ್‌ಗಳಲ್ಲಿ ನಮಾಝ್ ನಿರ್ವಹಿಸಲಾಗುತ್ತದೆ.

ಅದೇ ರೀತಿ ಕಿರಿಮಂಜೇಶ್ವರ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 6.45ಕ್ಕೆ, ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಮಸೀದಿಯಲ್ಲಿ ಬೆಳಗ್ಗೆ 6.35ಕ್ಕೆ, ಉದ್ಯಾವರ ಸಂಪಿಗೆನಗರ ಖದೀಮಿ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 7.15ಕ್ಕೆ, ಗುಜ್ಜರ ಬೆಟ್ಟು ಮೊಯ್ಯುದ್ದೀನ್ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 7ಗಂಟೆಗೆ, ಹೈಕಾಡಿ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 7.15ಕ್ಕೆ, ನೇಜಾರು ಉಮ್ಮೆ ಆಯಿಷಾ ಜಾಮೀಯ ಮಸೀದಿ ಬೆಳಗ್ಗೆ 6.45ಕ್ಕೆ, ಸಾಣೂರು ಮೊಹಿದ್ದೀನ್ ಜುಮ್ಮಾ ಮಸೀದಿ ಬೆಳಗ್ಗೆ 7ಗಂಟೆಗೆ, ಹೂಡೆ ಕದೀಮಿ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 7.30ಕ್ಕೆ, ಉದ್ಯಾವರ ಮಸ್ಜೀದಿ ಅಹ್ಲೇ ಹದೀಸ್‌ನಲ್ಲಿ ಬೆಳಗ್ಗೆ 7ಗಂಟೆಗೆ ಸಾಮೂಹಿಕ ನಮಾಝ್ ನಿರ್ವಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News