×
Ad

​ಹಾಲಿ- ಮಾಜಿ ಸಚಿವರ ನಡುವೆ ಮುಂದುವರಿದ ಟ್ವೀಟ್ ಸಮರ!

Update: 2020-07-29 23:26 IST

ಮಂಗಳೂರು, ಜು.29: ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಿಂಧು ಬಿ. ರೂಪೇಶ್‌ರವರ ವರ್ಗಾವಣೆಗೆ ಸಂಬಂಧಿಸಿ ದ.ಕ. ಜಿಲ್ಲೆಯ ಮಾಜಿ ಹಾಗೂ ಹಾಲಿ ಸಚಿವರ ನಡುವಿ ಟ್ವೀಟ್ ಸಮರ ಮುಂದುವರಿದಿದೆ.

ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್‌ರವರ ಆರೋಪದ ಟ್ವೀಟ್‌ಗೆ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟ್ವೀಟ್ ಮೂಲಕ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.

‘‘ನಮ್ಮ ಕಾಲದಲ್ಲಿ ಯಾವ ಐಎಎಸ್ ಅಧಿಕಾರಿಯೂ ಕೆಲಸವೇ ಬೇಡ ಅಂತಾ ರಾಜೀನಾಮೆ ನೀಡಿಲ್ಲ. ನಮ್ಮ ಕಾಲದಲ್ಲಿ ಜಿಲ್ಲಾಧಿಕಾರಿಗೆ ಧಮ್ಕಿ ಹಾಕುವ ಧೈರ್ಯ ದುಷ್ಕರ್ಮಿಗಳು ತೋರಿಲ್ಲ. ಯಾವೊಬ್ಬ ಅಧಿಕಾರಿಯನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿಲ್ಲ. ನಿಮ್ಮ ‘ಕಾಲ’ ಗುಣ ಬಂದ ಒಂದೇ ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿ ಅಪಮಾನಕ್ಕೀಡಾಗಿ ವಾಪಸ್ ಹೋಗಿದ್ದಾರೆ. ನಮ್ಮ ಕಾಲದಲ್ಲಿ ನಾನೇ ಅಧಿಕಾರ ಚಲಾಯಿಸಿದ್ದೆ. ಈಗ ಕಾಲ ನಿಮ್ಮದಿದ್ದರೂ ಅಧಿಕಾರ ಮಾತ್ರ ಬೇರೆಯವರ ಕೈಯಲ್ಲಿದೆಯಲ್ಲಾ’ ಎಂದು ಖಾದರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News