ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2020-07-29 23:29 IST
ಮಣಿಪಾಲ, ಜು.29: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೊಡ್ಡಣಗುಡ್ಡೆಯ ಸದಾಕತ್(27) ಎಂಬಾತನನ್ನು ಜು.22ರಂದು ಮಣಿಪಾಲದ ಉಪೇಂದ್ರ ಸರ್ಕಲ್ ಬಳಿ ಹಾಗೂ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಕೆಮ್ಮಣ್ಣು ಹೂಡೆಯ ಪ್ರಮೀತ್(21) ಎಂಬಾತನನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ಇವರಿಬ್ಬರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.