ಕೊರೋನ: ಧೂಮಪಾನಿಗಳಿಗೆ ಕಹಿ ಸುದ್ದಿ ನೀಡಿದ ಆರೋಗ್ಯ ಸಚಿವಾಲಯ

Update: 2020-07-29 18:35 GMT

ಹೊಸದಿಲ್ಲಿ, ಜು. 29: ಧೂಮಪಾನದ ಸಂದರ್ಭ ಕೊರೋನ ವೈರಸ್ ಕೈಯಿಂದ ಬಾಯಿಗೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಧೂಮಪಾನಿಗಳು ಕೊರೋನಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಧೂಮಪಾನದಿಂದ ಶ್ವಾಸಕೋಶದ ಸೋಂಕು ತೀವ್ರವಾಗಬಹುದು ಹಾಗೂ ಜನರು ಕೊರೋನ ಸೋಂಕಿಗೆ ಒಳಗಾಗಬಹುದು ಎಂದು ಅದು ಹೇಳಿದೆ. ತನ್ನ ವರದಿ ‘‘ಕೋವಿಡ್-19 ಪ್ಯಾಂಡಮಿಕ್ ಆ್ಯಂಡ್ ಟೊಬ್ಯಾಕೊ ಯೂಸ್ ಇನ್ ಇಂಡಿಯಾ’’ದಲ್ಲಿ ಸಚಿವಾಲಯ, ಧೂಮಪಾನದಿಂದ ಧೂಮಪಾನಿಗಳಲ್ಲಿ ತೀವ್ರ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು ಅಥವಾ ಕೊರೋನ ವೈರಸ್ ಶ್ವಾಸಕೋಶದ ಮೇಲೆ ದಾಳಿ ನಡೆಸುವುದರಿಂದ ಅದರಿಂದ ಸಾವನ್ನಪ್ಪಬಹುದು. ಆದುದರಿಂದ ಇಂತಹ ಉತ್ಪನ್ನಗಳನ್ನು ಬಳಸಬಾರದು ಎಂದು ಹೇಳಿದೆ. ಧೂಮಪಾನಿಗಳು ಧೂಮಪಾನ ಮಾಡುವಾಗ ಅವರ ಕೈಗಳು ತುಟಿಯನ್ನು ಸಂಪರ್ಕಿಸುತ್ತದೆ. ಇದರಿಂದ ಕೊರೋನ ವೈರಸ್ ಕೈಯಿಂದ ಬಾಯಿಗೆ ಹರಡುವ ಸಾಧ್ಯತೆ ಇದೆ ಎಂದು ಸಚಿವಾಲಯ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News