ಪುತ್ತೂರಿನಲ್ಲಿ 13 ಕೊರೋನ ಪಾಸಿಟಿವ್ ಪ್ರಕರಣ
Update: 2020-07-30 12:39 IST
ಪುತ್ತೂರು,ಜು.30: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ 13 ಕೊರೋನ ಪ್ರಕರಣಗಳು ದೃಢಪಟ್ಟಿವೆ.
ನಗರದ ಬಪ್ಪಳಿಗೆ ನಿವಾಸಿ 37 ವರ್ಷದ ಮಹಿಳೆ, 45 ವರ್ಷದ ಕೆಮ್ಮಿಂಜೆ ನಿವಾಸಿ ಪುರುಷ, 35 ವರ್ಷದ ತೆಂಕಿಲ ನಿವಾಸಿ ಮಹಿಳೆ, 54 ವರ್ಷದ ಉಪ್ಪಿನಂಗಡಿ ಮಠ ನಿವಾಸಿ ಪುರುಷ, 45 ವರ್ಷ ಪ್ರಾಯದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನೌಕರ, 38 ವರ್ಷ ಪ್ರಾಯದ ಮುಕ್ವೆ ನಿವಾಸಿ ಪುರುಷ, 40 ವರ್ಷ ಪ್ರಾಯದ ಕಬಕ ನಿವಾಸಿ ಪುರುಷ, 43 ವರ್ಷ ಪ್ರಾಯದ 34ನೇ ನೆಕ್ಕಿಲಾಡಿ ನಿವಾಸಿ ಪುರುಷ, 62 ವರ್ಷ ಪ್ರಾಯದ ನರಿಮೊಗರು ನಿವಾಸಿ ಪುರುಷರಲ್ಲಿ ಕೊರೋನ ದೃಢಪಟ್ಟಿದೆ.
ಕಡಬ ತಾಲೂಕಿನ ಕೊಲ ಕೆ.ಸಿ. ಫಾರ್ಮ್ ನಿವಾಸಿ 26 ವರ್ಷದ ಮಹಿಳೆ, 35 ವರ್ಷದ ಕುದ್ಮಾರು ನಿವಾಸಿ ಯುವಕ, 71 ವರ್ಷದ ಕುದ್ಮಾರು ನಿವಾಸಿ ವೃದ್ಧ, 50 ವರ್ಷದ ರಾಮಕುಂಜ ನಿವಾಸಿ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ.
ಈ ತನಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 239 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.