ರಾಜ್ಯಮಟ್ಟದ ಪುಸ್ತಕ ಆಯ್ಕೆಗೆ ಅವಧಿ ವಿಸ್ತರಣೆ

Update: 2020-07-30 13:12 GMT

ಉಡುಪಿ, ಜು.30: ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾದ ಕಾರಣ 2020ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆಗಾಗಿ ಸಲ್ಲಿಸುವ ಅವಧಿಯನ್ನು ಲೇಖಕರು, ಲೇಖಕ-ಪ್ರಕಾಶಕರು ಹಾಗೂ ಪ್ರಕಟಣಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

ಪುಸ್ತಕಗಳನ್ನು ಉಪನಿರ್ದೇಶಕರ ಕಚೇರಿ, ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ, ಬೆಂಗಳೂರು-560104 ಇಲ್ಲಿ ಆ.29ರೊಳಗೆ ಕಾಫಿರೈಟ್ ಮಾಡಿಸಿರಬೇಕು. ಕಾಫಿರೈಟ್ ಮಾಡಿಸಿರುವ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ಅದೇ ಕಛೇರಿಗೆ ಸಲ್ಲಿಸುವ ಅವಧಿ ಆ.31 ಆಗಿರುತ್ತದೆ.

ಹೆಚ್ಚಿನ ಮಾಹಿತಿಗೆ -www.karnatakapublicliabrary.gov.in- ಇಲಾಖೆ ಅಂತರ್ಜಾಲ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಗಳಲ್ಲಿ ಪಡೆಯಬಹುದು. ಅಗತ್ಯ ಮಾಹಿತಿದೆ ಕಛೇರಿಯ ದೂರವಾಣಿ: 080-22864990, 22867358ನ್ನು ಸಂಪರ್ಕಿಸುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಎಸ್ ಹೊಸಮನಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News