ಉಡುಪಿ: ಯುವಕ ನಾಪತ್ತೆ

Update: 2020-07-30 13:17 GMT

ಉಡುಪಿ, ಜು.30: ಉಡುಪಿ ಬೀಡಿನುಡ್ಡೆ ನಿವಾಸಿ ವಾಲಪ್ಪ ಚವ್ಹಾಣ(36) ಎಂಬುವರು 2018ರ ಫೆ.11ರಿಂದ ನಾಪತ್ತೆಯಾಗಿದ್ದಾರೆ. 5ಅಡಿ 4 ಇಂಚು ಎತ್ತರ, ಧೃಡಕಾಯ ಶರೀರ, ಗೋದಿ ಮೈಬಣ್ಣ ಹೊಂದಿದ್ದು, ಲಂಬಾಣಿ, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.

ಇವರ ಭುಜದ ಬಳಿ ಸುಟ್ಟ ಹಳೆಯ ಗಾಯದ ಗುರುತು ಇದೆ. ಇವರ ಸುಳಿವು ಸಿಕ್ಕಿದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News