ಅಧ್ಯಕ್ಷೀಯ ಚುನಾವಣೆ ಮುಂದೂಡಲು ಟ್ರಂಪ್ ಸಲಹೆ

Update: 2020-07-30 17:56 GMT

ವಾಶಿಂಗ್ಟನ್, ಜು. 30; ಕೊರೋನ ವೈರಸ್ ಸಾಂಕ್ರಾಮಿಕ ಮತ್ತು ‘ಮತದಾನದಲ್ಲಿ ವಂಚನೆಯಾಗುವ’ ಸಾಧ್ಯತೆಯ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಸಲಹೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದಾರೆ.

‘‘ಜನರು ಸುರಕ್ಷಿತವಾಗಿ ಮತ್ತು ಸರಿಯಾಗಿ ಮತದಾನ ಮಾಡಲು ಸಾಧ್ಯವಾಗುವಂತೆ ಚುನಾವಣೆಯನ್ನು ಮುಂದೂಡಬಹುದೇ???’’ ಎಂಬುದಾಗಿ ಅವರು ಟ್ವಿಟರ್‌ನಲ್ಲಿ ಕೇಳಿದ್ದಾರೆ.

‘‘ಯುನಿವರ್ಸಲ್ ಮೇಲ್-ಇನ್ ವೋಟಿಂಗ್ (ಆಬ್ಸೆಂಟೀ ವೋಟಿಂಗ್ ಅಲ್ಲ, ಅದು ಒಳ್ಳೆಯದೇ) ಮೂಲಕ 2020ರ ಮತದಾನವು ಚುನಾವಣಾ ಇತಿಹಾಸದಲ್ಲೇ ಅತ್ಯಂತ ಅನಿಯಮಿತ ಹಾಗೂ ವಂಚಕ ಮತದಾನವಾಗಲಿದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News