ನಾಸಾದ ಮಂಗಳ ಶೋಧಕ ನೌಕೆ ಉಡಾವಣೆ

Update: 2020-07-30 18:01 GMT

ಕೇಪ್ ಕ್ಯಾನವರಲ್ (ಅಮೆರಿಕ), ಜು. 30: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ಎನ್‌ಎಎಸ್‌ಎ-ನಾಸಾ)ನ ಇನ್ನೊಂದು ಮಂಗಳ ಗ್ರಹ ಶೋಧಕ ನೌಕೆ ‘ಪರ್ಸಿವರನ್ಸ್’ನ್ನು ಗುರುವಾರ ಉಡಾಯಿಸಲಾಗಿದೆ.

ಕೆಂಪು ಗ್ರಹದಲ್ಲಿ ಪ್ರಾಚೀನ ಕಾಲದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದವೆ ಎನ್ನುವುದನ್ನು ಪತ್ತೆಹಚ್ಚುವುದು ಹಾಗೂ ಅದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಗುರುತಿಸುವುದು ಅಮೆರಿಕದ ಈ ಬಾಹ್ಯಾಕಾಶ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅದೇ ವೇಳೆ, ಅದು ಭೂಮಿಗೆ ಹೊರತಾದ ಇನ್ನೊಂದು ಜಗತ್ತಿನಲ್ಲಿ ಹೆಲಿಕಾಪ್ಟರ್ ಡ್ರೋನ್ ಒಂದರ ಹಾರಾಟವನ್ನು ಮೊದಲ ಬಾರಿಗೆ ನಡೆಸಲಿದೆ.

ಫ್ರೋಕೇಪ್ ಕ್ಯಾನವರಲ್ ಬಾಹ್ಯಾಕಾಶ ಕೇಂದ್ರದಿಂದ ಶೋಧಕವನ್ನು ಹೊತ್ತ ‘ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಸ್ 5’ ರಾಕೆಟ್ ಭಾರತೀಯ ಕಾಲಮಾನ ಗುರುವಾರ ಸಂಜೆ 5:20ಕ್ಕೆ ಬಾಹ್ಯಾಕಾಶಕ್ಕೆ ನೆಗೆಯಿತು.

ಎಲ್ಲವೂ ಯೋಜನೆಯಂತೆ ಸಾಗಿದರೆ ‘ಪರ್ಸಿವರನ್ಸ್’ 2021 ಫೆಬ್ರವರಿ 18ರಂದು ಮಂಗಳ ಗ್ರಹವನ್ನು ತಲುಪಲಿದೆ ಹಾಗೂ 1997ರಿಂದ ಯಶಸ್ವಿಯಾಗಿ ಮಂಗಳವನ್ನು ತಲುಪಿದ 5ನೇ ಶೋಧಕವಾಗಲಿದೆ. ಈವರೆಗಿನ ಎಲ್ಲ ಮಂಗಳ ಗ್ರಹ ಶೋಧಕಗಳು ಅಮೆರಿಕದ್ದಾಗಿವೆ.

ಇತ್ತೀಚೆಗೆ ಯುಎಇ ಮತ್ತು ಚೀನಾಗಳು ತಮ್ಮ ಮಂಗಳ ಶೋಧಕಗಳನ್ನು ಉಡಾಯಿಸಿವೆ.

2012ರಲ್ಲಿ ಮಂಗಳನ ಮೇಲೆ ಇಳಿದಿರುವ ‘ಕ್ಯೂರಿಯಾಸಿಟಿ’ ಶೋಧಕವು ಈಗಲೂ ಸಕ್ರಿಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News