ತಲಪಾಡಿ ಕೋಟೆಕಾರ್ ಸಂಭ್ರಮದ ಬಕ್ರೀದ್

Update: 2020-07-31 04:35 GMT

ಮಂಗಳೂರು, ಜು.೩೧: ಕೋಟೆಕಾರ್ ತಲಪಾಡಿ ವ್ಯಾಪ್ತಿಯಲ್ಲಿ  ಸಂಭ್ರಮ, ಸಡಗರದಿಂದ ಶುಕ್ರವಾರ ಬಕ್ರೀದ್  ಆಚರಿಸಿದರು.

ತಲಪಾಡಿ ಬಿಲಾಲ್ ಜುಮಾ ಮಸ್ಜಿದ್, ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್, ಹಿದಾಯತ್ ನಗರ ಆಲ್ ಹಿದಾಯ ಜುಮಾ ಮಸ್ಜಿದ್, ಕೆ.ಸಿ.ನಗರ ಅಲ್ ಹುದಾ ಜುಮಾ ಮಸ್ಜಿದ್, ಅಜ್ಜಿನಡ್ಕ ಬದ್ರಿಯಾ ಜುಮಾ ಮಸ್ಜಿದ್, ತಲಪಾಡಿ ಪೂಮಣ್ಣು ಮಸ್ಜಿದ್ ಅನ್ಸಾರ್.ಎಸ್ ಉಚ್ಚಿಲ 407 ಜುಮಾ ಮಸ್ಜಿದ್ ಗಳಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ ಸಂಕ್ಷಿಪ್ತ ಸಮಯದಲ್ಲಿ ಈದ್ ಖುತುಬಾ ಹಾಗೂ ನಮಾಝ್ ನಿರ್ವಹಿಸಲಾಯಿತು. ಕಳೆದ ಕೆಲವು ತಿಂಗಳ ನಂತರ ಮಸೀದಿಯಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿದವರ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಪರಸ್ಪರ ಆಲಿಂಗನ ಹಸ್ತ ಲಾಘವ ಮಾಡಲು ಯಾವುದೇ ಮಸೀದಿಯಲ್ಲಿ ಅವಕಾಶ ಇರಲಿಲ್ಲ. ಪರಸ್ಪರ ಮಾತಿನ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News