ಸೋಂಕಿನ ಲಕ್ಷಣವಿದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ

Update: 2020-07-31 09:12 GMT

ಉಡುಪಿ, ಜು.31: ಯಾರಿಗೇ ಆದರೂ, ಕೋವಿಡ್-19 ಸೋಂಕಿನ ಯಾವುದೇ ಗುಣಲಕ್ಷಣ ಕಾಣಿಸಿಗೊಂಡರೆ, ಮನೆಯಲ್ಲಿ ಕಷಾಯ ಕುಡಿಯುತ್ತಾ, ಮಾತ್ರೆ ತೆಗೆದುಕೊಂಡು ಕಾಲಹರಣ ಮಾಡಬೇಡಿ. ತಕ್ಷಣ ಯಾವುದೇ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ, ಜಿಲ್ಲೆಯಲ್ಲಿ ಲಭ್ಯವಿರುವ ಉಚಿತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಮನವಿಯ ವೀಡಿಯೊ ಸಂದೇಶವೊಂದನ್ನು ಬಿಡುಗಡೆಗೊಳಿ ಸಿರುವ ಅವರು, ಜಿಲ್ಲೆಯಲ್ಲಿ ಕಳೆದ 10-15 ದಿನಗಳಿಂದ ಕೊರೋನ ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ, ರೋಗ ಲಕ್ಷಣವಿದ್ದರೂ ಮನೆಯಲ್ಲಿ ಕುಳಿತು ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಜೀವ ಉಳಿಸಲು ಸಾಧ್ಯವಾಗದ ಕಾರಣ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದರು.
ಆದುದರಿಂದ ಯಾವುದಾದರೂ ಕೋವಿಡ್‌ನ ಸಣ್ಣ ಲಕ್ಷಣ ಕಂಡುಬಂದರೂ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಜಿಲ್ಲೆಯಲ್ಲಿ 
ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ, ಉಚಿತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಹೀಗಾಗಿ ಯಾರೂ ಕೂಡಾ ಉದಾಸೀನ ಮಾಡಿ ಮನೆಯಲ್ಲೇ ಇರಬೇಡಿ ಎಂದು ಮನವಿ ಮಾಡಿದರು. ಆದುದರಿಂದ ಜಿಲ್ಲೆಯ ಜನರಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ, ಯಾವುದಾದರೂ ಕೋವಿಡ್‌ನ ಸಣ್ಣ ಲಕ್ಷಣ ಕಂಡುಬಂದರೂ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಜಿಲ್ಲೆಯಲ್ಲಿ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾ ಗುತ್ತದೆ ಆಹಗೂ ಉಚಿತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಹೀಗಾಗಿ ಯಾರೂ ಕೂಡಾ ಉದಾಸೀನ ಮಾಡಿ ಮನೆಯಲ್ಲೇ ಇರಬೇಡಿ ಎಂದು ಮನವಿ ಮಾಡಿದರು. ಕಷಾಯ, ಮಾತ್ರೆಗೆ ಸಮಯವಲ್ಲ: ನಿಮ್ಮಲ್ಲಿ ಕೆಮ್ಮು, ಶೀತ, ಜ್ವರ, ಗಂಟಲುನೋವು ಕಂಡುಬಂದರೆ ತಕ್ಷಣ ನಮ್ಮ ಫೀವರ್‌ಕ್ಲಿನಿಕ್‌ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಜ್ವರ, ಶೀತ, ಕೆಮ್ಮ ಇದ್ದಾಗ ಮಾತ್ರೆ ತಿನ್ನುತ್ತಾ, ಕಷಾಯ ಕುಡಿಯುತ್ತಾ ಕೂರಬೇಡಿ. ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪುನ:, ಪುನ: ಮನವಿ ಮಾಡಿದರು. ನಮ್ಮಲ್ಲಿ ಎಲ್ಲಾ ಲಕ್ಷಣಗಳಿಗೂ ಪ್ರತ್ಯೇಕ ಚಿಕಿತ್ಸೆ ಇದೆ. ಸೋಂಕಿನ ಲಕ್ಷಣ ಇಲ್ಲದವರಿಗೆ, ಇರುವವರಿಗೆ, ವೆಂಟಿಲೇಟರ್, ಆಮ್ಲಜನಕದ ಅಗತ.್ಯ ಉಳ್ಳವರಿಗೆ ಹಾಗೂ ಐಸಿಯುನಲ್ಲಿ ಚಿಕಿತ್ಸೆ ಬೇಕಾದವರಿಗೆ ಪ್ರತ್ಯೇಕವಾದ ಚಿಕಿತ್ಸೆ ಲಭ್ಯವಿದೆ ಎಂದು ವಿವರಿಸಿದರು.
 ಆದುದರಿಂದ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುವಾಗ ದಾರಿ ಮಧ್ಯೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಯಾರಿಗೂ ಬರಬಾರದು. ನಮ್ಮ ಜಿಲ್ಲೆ ಕೋವಿಡ್ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ನಮಗೆ ಜನರ ಜೀವ ಉಳಿಸುವುದು ಮುಖ್ಯವಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ನಮ್ಮ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
 ಇನ್ನು ಕೊರೋನ ಲಕ್ಷಣದೊಂದಿಗೆ ನೀವು ಮನೆಯಲ್ಲೇ ಇದ್ದರೆ, ಅದರಿಂದ ಮನೆಯ ಉಳಿದವರಿಗೂ ಇದು ಹರಡುತ್ತದೆ. ಇದೇ ಕಾರಣದಿಂದ ಈಗ ಒಂದು ಮನೆಯಲ್ಲಿ ಎಲ್ಲರಿಗೂ ಪಾಸಿಟಿವ್ ಬರುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ ರೋಗ ಲಕ್ಷಣ ಇರುವವರು, ಮನೆಯ ಉಳಿದವರನ್ನು ಕೊರೋನದಿಂದ ರಕ್ಷಿಸಲಾದರೂ ಕೂಡಲೇ ಪರೀಕ್ಷೆಗೊಳಗಾಗಿ ಚಿಕಿತ್ಸೆ ಪಡೆದು ಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ಕೊರೋನ ಸೋಂಕಿನಿಂದ ಸತ್ತವರ ಸಾವಿನ ಕಾರಣಗಳನ್ನು ಪರಿಶೀಲಿಸಿದಾಗ, ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುವವರು ಸೋಂಕಿನಿಂದ ಹೆಚ್ಚು ಸತ್ತಿದ್ದಾರೆ. ಅದೇ ರೀತಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಹೆಚ್ಚಿನ ಹಿರಿಯ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಇರುವವರು ಮತ್ತು ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ಇರಲಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಹಿರಿಯರನ್ನು ರಕ್ಷಿಸಿ: ನಮಗೆ ನಮ್ಮ ಹಿರಿಯರ ಮೇಲೆ ಗೌರವವಿದ್ದರೆ ಅವರು ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ. ಕಾಯಿಲೆಯ ಗುಣಲಕ್ಷಣ ಇರುವವರು ಹಾಗೂ ಹೊರಗಿನವರ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಿ. ಇದು ನಮ್ಮೆಲ್ಲರ ಕರ್ತವ್ಯವೂ ಹೌದು, ಜವಾಬ್ದಾರಿಯೂ ಹೌದು.
ಒಟ್ಟಿನಲ್ಲಿ ಸೋಂಕಿತರನ್ನು ಹಾಗೂ ಹಿರಿಯ ನಾಗರಿಕರನ್ನು ರಕ್ಷಿಸುವುದು ನಮ್ಮ ಹೋರಾಟದ ಉದ್ದೇಶ. ಜೀವ ಉಳಿಸುವ ಈ ಹೋರಾಟದಲ್ಲಿ ಪ್ರತಿಯೊಬ್ಬರೂ ಸೇನಾನಿಯಾಗಬೇಕಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News