ಕೊವಿಡ್ ಸೋಂಕಿತರಿಂದ ನಿಗದಿಗಿಂತ ಹೆಚ್ಚು ಹಣವಸೂಲು ಮಾಡಿದರೆ ಸೂಕ್ತ ಕ್ರಮ

Update: 2020-07-31 11:28 GMT

ಮಂಗಳೂರು,ಜು.31: ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣವನ್ನು ಕೊವಿಡ್ ಸೋಂಕಿತ ರಿಂದ ವಸೂಲು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ಕೋವಿಡ್-19 ನಿಯಂತ್ರಣ ಕ್ಕೆ ಸೂಕ್ತ ಕ್ರಮ  ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ವಾರ್ಡ್ ಮಟ್ಟದಲ್ಲಿ ಕಾರ್ಯ ಪಡೆಗಳನ್ನು ರಚಿಸಲಾಗಿದೆ. ಮುಂದಿನ ಹಂತದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗೂ ವಿದ್ಯಾವಂತರ ಸಹಾಯದೊಂದಿಗೆ ಸ್ಥಳೀಯ ಕಾರ್ಯಪಡೆ ಗಳನ್ನು ಸಕ್ರ ಯಗೊಳಿಸುವ ಗುರಿಹೊಂದಲಾಗಿದೆ ಎಂದು ತಿಳಿಸಿದ್ದಾರೆ.

 50ಸಾವಿರ ಮಂದಿಯ ಕೋವಿಡ್ ಪರೀಕ್ಷೆ

ಈಗಾಗಲೇ 50ಸಾವಿರ ಮಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 5,504ಮಂದಿ ಸೋಂಕಿತರು (ಪಾಸಿಟಿವ್)ಪತ್ತೆಯಾಗಿದ್ದಾರೆ. 2568 ಮಂದಿ ಗುಣ ಮುಖ ರಾಗಿದ್ದಾರೆ. 2800ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 142ಮಂದಿ ಮ್ರತಪಟ್ಡಿದ್ದಾರೆ. 415 ಕೋವಿಡ್ ಕೇಂದ್ರಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ 61ಆಸ್ಪತ್ರೆಗಳಲ್ಲಿ  4608 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ ಸಿದ್ಧವಾಗಿದೆ. ಈ ಪೈಕಿ 662ರಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ‌

*ಕೋವಿಡ್ ಕುಂದು ಕೊರತೆಯ ಸಹಾಯವಾಣಿಯನ್ನು ಜಿಲ್ಲೆಯಲ್ಲಿ ಆರಂಭಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುರಿ ಇದೆ. ಗಡಿ ಭಾಗದ ಜನರ ಸಮಸ್ಯೆ ಬಗೆಹರಿಸಲು ಸರಕಾರದ ನಿಯಮಾವಳಿಯ ವ್ಯಾಪ್ತಿಯೊಳಗೆ ಗಮನಹರಿಸುವುದಾಗ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News