ಗಂಗೊಳ್ಳಿ: ಕರಾವಳಿ ಕಾವಲು ಪಡೆ ಸ್ಟೇಶನ್ ಸೀಲ್‌ಡೌನ್

Update: 2020-07-31 15:28 GMT
file photo

ಉಡುಪಿ, ಜು.31: ಇಬ್ಬರು ಸಿಬ್ಬಂದಿಗಳು ಕೋವಿಡ್‌ಗೆ ಪಾಸಿಟಿವ್ ಫಲಿತಾಂಶ ಪಡೆದಿರುವ ಹಿನ್ನೆಲೆಯಲ್ಲಿ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹಾಗೂ ಇನ್ನೊಬ್ಬ ಸಿಬ್ಬಂದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ಇದರಿಂದ ಸೋಮವಾರದವರೆಗೆ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಠಾಣೆಯನ್ನು ಎರಡು ಬಾರಿ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು. ಎಸ್‌ಐ ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

 ಇಂದು ಕುಂದಾಪುರ (48) ಹಾಗೂ ಬೈಂದೂರು (8) ತಾಲೂಕುಗಳಲ್ಲಿ ಒಟ್ಟು 56 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕುಂದಾಪುರ ತಾಲೂಕಿನ ಕುಂಭಾಶಿಯ 13, ಕೋಣಿಯ 7, ಬಳ್ಕೂರಿನ 6, ಆಲೂರು ಮತ್ತು ಬೀಜಾಡಿಯ ತಲಾ ಐವರು, ಕುಂದಾಪುರ ಪುರಸಭೆ ವ್ಯಾಪ್ತಿಯ 4, ಮೊಳಹಳ್ಳಿ ಮತ್ತು ತ್ರಾಸಿಯ ತಲಾ ಮೂವರು, ಆನಗಳ್ಳಿ 1ರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಗಳಿಗೆ ಸೇರಿಸಿ ಮನೆಗಳನ್ನು ಸೀಲ್‌ಡೌನ ಮಾಡಲಾಗಿದೆ.

ಅದೇ ರೀತಿ ಬೈಂದೂರು ತಾಲೂಕಿನ ಹಡವು ಗ್ರಾಮದ ನಾಲ್ವರು, ಶಿರೂರು, ನಾಡ, ಕೆರ್ಗಾಲ್ ಹಾಗೂ ಕಂಬದಕೋಣೆಯ ತಲಾ ಒಬ್ಬರಲ್ಲಿ ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ. ಬಸ್ರೂರು ಗುಲ್ವಾಡಿ ಗ್ರಾಮದ ಪುರುಷ ಹಾಗೂ ಇಬ್ಬರು ಮಹಿಳೆಯರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಬಾರಕೂರಿನಲ್ಲಿ ಇಬ್ಬರು: ಬ್ರಹ್ಮಾವರ ತಾಲೂಕಿನ ಬಾರಕೂರಿನ ಇಬ್ಬರಲ್ಲಿ ಇಂದು ಕೊರೋನ ಪಾಸಿಟಿವ್ ಕಂಡುಬಂದಿದೆ. 76 ವರ್ಷ ಪ್ರಾಯದ ವೃದ್ಧರಲ್ಲಿ ಸೋಂಕು ಪತ್ತೆಯಾದ ಕಾರಣ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿ ಅವರ ಒಂದು ಒಂಟಿ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಮತ್ತೊಬ್ಬರು ಸುಮಾರು 50ರ ಹರೆಯದ ಮಹಿಳೆಯಲ್ಲೂ ಪಾಸಿಟಿವ್ ಕಂಡುಬಂದಿದ್ದು, ಅವರು ಮನೆಯ ಸುತ್ತಮುತ್ತ ಹಾಗೂ ಬೀದಿಯ ಒಟ್ಟು 11 ಮನೆಗಳನ್ನು ಸೀಲ್‌ಡೌನ್ ಮಾಡಿ ಕಂಟೈನ್‌ಮೆಂಟ್ ವಲಯ ರಚಿಸಲಾಗಿದೆ ಎಂದು ಕೋಟದ ಆರ್‌ಐ ರಾಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News