ಅಮೆರಿಕದಲ್ಲೂ ಚೀನಾದ ಟಿಕ್‌ಟಾಕ್ ನಿಷೇಧ ಸಾಧ್ಯತೆ: ಟ್ರಂಪ್

Update: 2020-08-01 04:43 GMT

ವಾಷಿಂಗ್ಟನ್, ಆ.1: ರಾಷ್ಟ್ರೀಯ ಭದ್ರತೆಗೆ ಅಪಾಯದ ಮೂಲವಾಗಿರುವ ಚೀನಾ ಮಾಲಕತ್ವದ ಜನಪ್ರಿಯ ವೀಡಿಯೊ ಆ್ಯಪ್ ಟಿಕ್ ಟಾಕ್ ಅನ್ನು ನಿಷೇಧಿಸುವ ಸಾಧ್ಯತೆ ಬಗ್ಗೆ ತಮ್ಮ ಆಡಳಿತ ಪರಿಶೀಲನೆ ನಡೆಸುತ್ತಿದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಚೀನಾದ ಬೈಟೆಡ್ಯಾನ್ಸ್ ಟಿಕ್‌ಟಾಕ್ ಮಾರಾಟ ಮಾಡಲು ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಈ ಹೇಳೀಕೆ ನೀಡಿದ್ದಾರೆ. ಸಾಫ್ಟ್‌ವೇರ್ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್, ಈ ಆ್ಯಪ್ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದೆ ಎಂಬ ವರದಿಗಳೂ ಶುಕ್ರವಾರ ಪ್ರಕಟವಾಗಿದ್ದವು.

ಟಿಕ್ ಟಾಕ್ ಬಗ್ಗೆ ನಾವು ಗಮನಹರಿಸಿದ್ದೇವೆ. ನಾವು ಟಿಕ್ ಟಾಕ್ ನಿಷೇಧಿಸುವ ಸಾಧ್ಯತೆಯೂ ಇದೆ. ಮತ್ತೆ ಕೆಲ ಆಯ್ಕೆ ಬಗ್ಗೆಯೂ ಯೋಚಿಸುತ್ತಿದ್ದೇವೆ. ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ. ಅದು ಆಗಲಿ ಎನ್ನುವುದು ನಮ್ಮ ಆಶಯ ಎಂದು ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದ್ದಾರೆ.

ಟಿಕ್‌ಟಾಕ್‌ನ ಮಾಲಕತ್ವದಿಂದ ವಿಮುಖವಾಗುವಂತೆ ಬೈಟೆಡ್ಯಾನ್ಸ್‌ಗೆ ಟ್ರಂಪ್ ಆಡಳಿತ ಆದೇಶಿಸಲಿದೆ ಎಂಬ ವರದಿ ಬ್ಲೂಮ್‌ಬರ್ಗ್ ನ್ಯೂಸ್ ಮತ್ತು ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News