ಪುತ್ತೂರು-ಕಡಬ: ಒಂದು ತಿಂಗಳ ಮಗು ಸಹಿತ 9 ಮಂದಿಗೆ ಕೊರೋನ

Update: 2020-08-01 06:31 GMT

ಪುತ್ತೂರು, ಆ.1: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಶನಿವಾರ 9 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ 35 ವರ್ಷದ ಯುವಕ, ಚಿಕ್ಕಮುಡ್ನೂರು ಗ್ರಾಮದ 62 ವರ್ಷದ ಪುರುಷ, ಪುತ್ತೂರು ಪರ್ಲಡ್ಕದ 55 ವರ್ಷದ ಮಹಿಳೆ, 57 ವರ್ಷದ ಮಹಿಳೆ, 22 ವರ್ಷದ ಯುವತಿ, ನೆಲ್ಲಿಕಟ್ಟೆ ನಿವಾಸಿ 53 ವರ್ಷದ ಪುರುಷ, ನಗರದ ಪಾಂಗಳಾಯಿ ನಿವಾಸಿ 55 ವರ್ಷದ ಮಹಿಳೆಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

ಕಡಬ ತಾಲೂಕಿನ ಕೊಯ್ಲ ಗ್ರಾಮದ ಒಂದು ತಿಂಗಳ ಮಗುವಿನಲ್ಲಿ ಕೊರೋನ ಪತ್ತೆಯಾಗಿದೆ. ಶಿರಾಡಿ ಗ್ರಾಮದ ಉದನೆ ನಿವಾಸಿ 28 ವರ್ಷದ ಯುವಕನಲ್ಲಿ ಕೊರೋನ ದೃಢಪಟ್ಟಿದೆ. ಈ ಒಂಬತ್ತು ಪ್ರಕರಣಗಳೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 265ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News