ಪರಿಣಾಮಕಾರಿ ಕೊರೋನ ನಿಯಂತ್ರಣಕ್ಕೆ 'ದಿಲ್ಲಿ ಮಾದರಿ' ಅನುಸರಿಸಿ: ಕೇಂದ್ರ ಸಚಿವ

Update: 2020-08-01 11:26 GMT

ಹೈದರಾಬಾದ್ : ಕೊರೋನವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಎಲ್ಲಾ ರಾಜ್ಯಗಳೂ 'ದಿಲ್ಲಿ ಮಾದರಿ'ಯನ್ನು ಅನುಸರಿಸಬೇಕೆಂದು ಕೇಂದ್ರ ಗೃಹ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ಹೈದರಾಬಾದ್‍ನಲ್ಲಿ ಹೇಳಿದ್ದಾರೆ.

"ಟೆಸ್ಟಿಂಗ್, ಟ್ರೇಸಿಂಗ್ ಮತ್ತು ಟ್ರೀಟ್ಮೆಂಟ್‍ಗೆ ಒತ್ತು ನೀಡುವಂತೆ  ರಾಜ್ಯ ಸರಕಾರ (ತೆಲಂಗಾಣ)ವನ್ನು ನಾನು ವಿನಂತಿಸುತ್ತಿದ್ದೇನೆ. ತೆಲಂಗಾಣದಲ್ಲಿ ನಡೆಸಲಾಗುವ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಪರೀಕ್ಷೆಗಳನ್ನು ಹೆಚ್ಚು ಮಾಡಿದಷ್ಟು ಸೋಂಕಿನ ನಿಯಂತ್ರಣ ಶೀಘ್ರವಾಗುತ್ತದೆ. ನಿಮಗೆ ತಿಳಿದಿರಬೇಕು ನಾನು ಸ್ವತಃ ನೋಡಿಕೊಳ್ಳುತ್ತಿರುವ ಕೇಂದ್ರಾಡಳಿತ ಪ್ರದೇಶ ದಿಲ್ಲಿಯಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ. 84ರಷ್ಟಿದೆ. ಎಲ್ಲಾ ರಾಜ್ಯಗಳೂ ದಿಲ್ಲಿ ಮಾದರಿಯನ್ನು ಅನುಸರಿಸಬೇಕು,'' ಎಂದು ರೆಡ್ಡಿ ಹೇಳಿದ್ದಾರೆ.

ಗಚಿ ಬೌಲಿಯಲ್ಲಿ ಕ್ರೀಡಾಸಂಕೀರ್ಣದಲ್ಲಿ ಆಸ್ಪತ್ರೆಯಾಗಿ ಪರಿವರ್ತಿಸಲ್ಪಟ್ಟ 14 ಅಂತಸ್ತಿನ ಕಟ್ಟಡಕ್ಕೆ ಅವರು ಭೇಟಿ ನೀಡಿದ ವೇಳೆ ಮಾತನಾಡುತ್ತಿದ್ದರು.

ರಾಜ್ಯದ ಕೊರೋನ ಸೇನಾನಿಗಳಿಗೆ ಸೂಕ್ತ ಪ್ರೋತ್ಸಾಹಧನ ನೀಡಿ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕೆಂದು ಸಚಿವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News