​ಬ್ರಹ್ಮಾವರ 4, ಕೋಟ 4, ಕುಂದಾಪುರ 26 ಕಡೆ ಸೀಲ್‌ಡೌನ್

Update: 2020-08-01 15:05 GMT

ಉಡುಪಿ, ಆ.1: ಮಂದಾರ್ತಿ ಶಿರೂರಿನ ಒಂದು ಬಾರ್ ಸೇರಿದಂತೆ ಕೋಟ ಹೋಬಳಿಯಲ್ಲಿ ಇಂದು ಪಾಸಿಟಿವ್ ಬಂದ ಒಟ್ಟು ನಾಲ್ಕು ಮಂದಿಯ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಕೋಟ ಆರ್‌ಐ ರಾಜು ತಿಳಿಸಿದ್ದಾರೆ.

ಮಂದಾರ್ತಿ ಶಿರೂರಿನ ಬಾರ್ ಮಾಲಕರಲ್ಲಿ ಇಂದು ಕೊರೋನ ಪಾಸಿಟಿವ್ ಕಂಡುಬಂದಿದ್ದು, ಅವರ ಆವರ್ಸೆಯ ಮನೆಯೊಂದಿಗೆ ಬಾರ್ ಹಾಗೂ ಪಕ್ಕದ ಅಂಗಡಿಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನುಳಿದಂತೆ ಆವರ್ಸೆಯ ಇನ್ನೊಬ್ಬರು, ಬಾರಕೂರು ಹನೆಹಳ್ಳಿ ಹಾಗೂ ಕೋಟ ಮಣೂರಿನ ಒಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ಸೇರಿಸಿ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಬ್ರಹ್ಮಾವರದಲ್ಲಿ 4 ಕಡೆ: ಬ್ರಹ್ಮಾವರ ಹೋಬಳಿಯಲ್ಲೂ ನಾಲ್ಕು ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಕೊಕ್ಕರ್ಣೆ ಸಮೀಪದ ಪೆಜಮಂಗೂರಿನ 66ರ ವೃದ್ಧರಲ್ಲಿ ಸೋಂಕು ಪತ್ತೆಯಾಗಿದ್ದು, ಇಲ್ಲಿ ಒಟ್ಟು ಐದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಚಾಂತಾರು ಗ್ರಾಮದಲ್ಲಿ ಮುಂಬೈ ಯಿಂದ ಬಂದ 44ರ ವ್ಯಕ್ತಿ ಕೊರೋನಕ್ಕೆ ಪಾಸಿಟಿವ್ ಆಗಿದ್ದು, ಆತ ವಾಸವಾಗಿದ್ದ ವಸತಿ ಸಂಕೀರ್ಣದ ಮನೆಯೊಂದಿಗೆ ಅಲ್ಲಿನ 20 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಇನ್ನೆರಡು ಪ್ರಕರಣಗಳು ಹೇರೂರು ಗ್ರಾಮದಲ್ಲಿ ಕಂಡುಬಂದಿದ್ದು, ಇಲ್ಲಿನ 30ರ ಹರೆಯದ ಯುವಕನಿಗೆ ಪಾಸಿಟಿವ್ ಇದ್ದು, ಆತನ ಮನೆಯ ಸುತ್ತಮುತ್ತ ಐದು ಮನೆಗಳು ಕಂಟೈನ್‌ಮೆಂಟ್ ವಲಯವಾಗಿದೆ. ಇನ್ನೊಬ್ಬರು 50 ವರ್ಷ ಪ್ರಾಯದವರಾಗಿದ್ದು, ಅಲ್ಲಿ ಎರಡು ಮನೆಗಳು ಸೀಲ್‌ಡೌನ್ ಆಗಿವೆ.

ಕುಂದಾಪುರ-26: ಕುಂದಾಪುರ ತಾಲೂಕಿನಲ್ಲಿ 22 ಹಾಗೂ ಬೈಂದೂರು ತಾಲೂಕಿನಲ್ಲಿ ನಾಲ್ವರಲ್ಲಿ ಶನಿವಾರ ಪಾಸಿಟಿವ್ ಕಂಡುಬಂದಿದೆ. ಕುಂದಾಪುರದ ಆಲೂರು-4, ಪುರಸಭಾ ವ್ಯಾಪ್ತಿ-3, ಸೇನಾಪುರ,ಕಾವ್ರಾಡಿ ತಲಾ 2, ಹಂಗಳೂರು, ಅಮಾಸೆಬೈಲು, ಬಳ್ಕೂರು, ಬೀಜಾಡಿ, ಬೇಳೂರು, ಕಟ್‌ಬೆಲ್ತೂರು, ಕೋಣಿ, ಕುಂದಬಾರಂದಾಡಿ, ಶಂಕರನಾರಾಯಣ, ತ್ರಾಸಿ ಹಾಗೂ ತೆಕ್ಕಟ್ಟೆಯ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಬೈಂದೂರು ತಾಲೂಕಿನಲ್ಲಿ ಜಡ್ಕಲ್, ಯಡ್ತರೆ, ಬೈಂದೂರು ಹಾಗೂ ಕಿರಿಮಂಜೇಶ್ವರಗಳಲ್ಲಿ ತಲಾ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಮನೆಗಳನ್ನು ಸೀಲ್‌ಡೌನ್ ಮಾಡಿ ಕಂಟೈನ್‌ಮೆಂಟ್ ವಲಯಗಳನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News